Saturday, 14th December 2024

4283 ಕೋಟಿ ರೂ.ಗಳ 220 ಕಾಮಗಾರಿಗಳ ಅಡಿಗಲ್ಲು, ಉದ್ಘಾಟನೆ: ಶಿವನಗೌಡ ನಾಯಕ

ನಾಳೆ ಗಬ್ಬೂರಿಗೆ ಅಮಿತ ಶಾ ಭೇಟಿ ಸಕಲ ಸಿದ್ಧತೆ; ಎರೆಡು ಲಕ್ಷ ಜನ ಸೇರುವ ನಿರೀಕ್ಷೆ

ರಾಯಚೂರು: ನಾಳೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮಕ್ಕೆ ಕೇಂದ್ರ ಗೃಹ ಸಚಿವ ಆಮಿತ್ ಶಾ ಹಾಗೂ ರಾಜ್ಯದ ಸಿಎಂ, ಮಾಜಿ ಸಿಎಂ ಸೇರಿದಂತೆ ಕೇಂದ್ರದ ಮತ್ತು ರಾಜ್ಯದ ಸಚಿವರು ಆಗಮಿಸುತ್ತಿದ್ದು 4283 ಕೋಟಿ ರೂ.ಗಳ 220 ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆ ನೆರವೇರಿಸಲಾಗುತ್ತಿದೆ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಅವರಿಂದು ಗಬ್ಬೂರಿನಲ್ಲಿ ಕಾರ್ಯಕ್ರಮ ಸಿದ್ದತೆ ಪರಿಶೀಲನೆ ನಂತರ ಸುದ್ದಿಗೋಷ್ಟಿಯಲ್ಲಿ ಕಾಮಗಾರಿ ಪಟ್ಟಿಯಿರುವ “ನಿಮ್ಮ ಒಂದು ಮತದಿಂದ” ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಅರ್ಜುನನ ಮಗ ಬಬ್ರುವಾಹನ ನಡೆದಾಡಿದ ಪುಣ್ಯ ಭೂಮಿಯಾದ ಗಬ್ಬೂರಿನಲ್ಲಿ ದೇಶದ ಗೃಹ ಮಂತ್ರಿ ಅಮಿತ್ ಶಾ ರವರು ಅಂದು ಮಧ್ಯಾಹ್ನ ಆಗಮಿಸಲಿದ್ದು ಅವರೊಂದಿಗೆ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ, ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ಸಚಿವ ಪ್ರಹ್ಲಾದ ಜೋಷಿ, ಸಚಿವ ವಿ.ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆಂದರು.

ಏಷ್ಯಾ ಖಂಡದಲ್ಲೆ ಅತ್ಯಂತ ಹಿಂದುಳಿದ ತಾಲೂಕು ಎಂಬ ಕುಖ್ಯಾತಿಗೆ ಗುರಿಯಾಗಿದ್ದ ದೇವದುರ್ಗ ತಾಲೂಕಿನ ಸಮಗ್ರ ಅಭಿವೃದ್ದಿಗೆ ನಾನು ಪಣತೊಟ್ಟಿದ್ದು ಸಾವಿರಾರು ಕೋಟಿ ರೂ ಅನುದಾನ ತರುವ ಮೂಲಕ ನೂರಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದ ಅವರು ಸಾಕ್ಷರತೆ ಮತ್ತು ಪೌಷ್ಟಿಕಾಂಶ ಕೊರೆತಯಿಂದ ಬಳಲುತ್ತಿದ್ದ ದೇವದುರ್ಗದಲ್ಲಿ ಸಾಕ್ಷರತೆ ಮತ್ತು ಪೌಷ್ಟಿಕಾಂಶ ಕೊರೆತೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಅಭಿವೃದ್ದಿ ಮಾಡಲಿಲ್ಲವೆಂದ ಅವರು ನಾನು ಶಾಸಕನಾದ ಮೇಲೆ ರಸ್ತೆಗಳು ಸೇರಿದಂತೆ ಮೂಲಭೂತ ಸೌಲಭ್ಯ ಕುಡಿಯುವ ನೀರು, ಕೊನೆ ಭಾಗಕ್ಕೆ ನೀರಾವರಿ, ಶಾಲೆಗಳು, ಇಂಜಿನಿಯರಿAಗ ಕಾಲೇಜು, ಕೇಂದ್ರೀಯ ವಿದ್ಯಾಲಯ ಇನ್ನಿತರ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದೇನೆ0ದ ಅವರು ತಾವು ೧೦ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಎಸ್‌ಎಫ್‌ಐ ಸಂಘಟನೆಯಲ್ಲಿ ಸಕ್ರೀಯ ನಾಗಿದ್ದಾಗ ತಾಲೂಕಿನ ಕೆಡಿಪಿ ಸಭೆಗೆ ಬಂದ ಸಚಿವರಿಗೆ ಮನವಿ ನೀಡಿ ಜಿಲ್ಲೆಯ ಸಮಸ್ಯಗಳ ಬಗ್ಗೆ ಗಮನ ಹರಿಸುವಂತೆ ಕೋರಿದ್ದೆ ನಂತರ ನಾನು ಜನರ ಆಶೀರ್ವಾದದಿಂದ ಶಾಸಕನಾಗಿ , ಮಂತ್ರಿಯಾಗಿ ದೇವದುರ್ಗವನ್ನು ಮಾದರಿ ತಾಲೂಕು ಮಾಡಬೇಕೆನ್ನುವ ಕನಸ್ಸು ಈಗ ನನಸಾಗುವ ಸಮಯ ಬಂದಿದ್ದು ಅದರ ಭಾಗವಾಗಿ ಸಾವಿರಾರು ಕೋಟಿ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿದ್ದು ಕ್ಷೇತ್ರದ ಜನರು ಅದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ ಕಾರ್ಯಕ್ರಮಕ್ಕೆ ಬರುವ ಜನರಿಗೆ ಒಳ್ಳೆ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದರು.

ತಾಲೂಕಿನ ೪೫ ಹಳ್ಳಿಗಳಿಗೆ ನೀರಿನ ಬವಣೆ ನೀಗಿಸಲು ಹೆಜ್ಜೆಯಿಡಲಾಗಿದ್ದು ೨೫೦ ಕೋಟಿ ರೂ ವೆಚ್ಚದಲ್ಲಿ ಬಂಗಾರಪ್ಪ ರಸರ್‌ವೈಯರ್ ತುಂಬಿಸಿ ರಾಯಚೂರು ನಗರಕ್ಕೆ ಕುಡಿಯುವ ನೀರಿನ ತೊಂದರೆಯಾಗದ0ತೆ ಪ್ರಯತ್ನಿಸಲಾಗುತ್ತದೆ ಅದರ ಕಾರ್ಯ ಶೇ.೩೦ ರಷ್ಟು ಪ್ರಗತಿಯಲ್ಲಿದೆ ಎಂದ ಅವರು ದೇವದುರ್ಗ ತಾಲೂಕು ಮತ್ತು ರಾಯಚೂರು ಗ್ರಾಮೀಣದಲ್ಲಿ ಸುಮಾರು ೭೮ ಕಿ.ಮಿ ಕೃಷ್ಣಾ ನದಿ ಹರಿಯುತ್ತದೆ ಆ ಭಾಗದ ಜಮೀನುಗಳಿಗೆ ನೀರು ಹರಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಜಿಲ್ಲೆಗೆ ವಿಮಾನ ನಿಲ್ದಾಣ ಕನಸು ನನಸಾಗುತ್ತಿದ್ದು ಸುಮಾರು ೨೩೦ ಕೋಟಿ ರೂ ವೆಚ್ಚದಲ್ಲಿ ಯರಮರಸ್ ಬಳಿ ವಿಮಾನ ನಿಲ್ದಾಣ ಕಾಮಗಾರಿಗೆ ಅಡಿಗಲ್ಲು ಅಂದು ನೆರವೇರಿಸಲಾಗುತ್ತಿದ್ದು ಜಿಲ್ಲೆಗೆ ವಿಮಾನ ನಿಲ್ದಾಣ ನೀಡಬೇಕೆಂದು ಸಂಕಲ್ಪಿಸಲಾದ ಅಂದಿನ ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ನವರಿಗೆ ಒತ್ತಡ ಹೇರಿ ಅದಕ್ಕೆ ಪೂರಕವಾದ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು ನಮ್ಮ ಕ್ಷೇತ್ರದ ಅನುದಾನ ಮತು ಜಿಲ್ಲೆಯೆ ಎಲ್ಲ ಶಾಸಕರು ತಮ್ಮ ಅನುದಾನ ನೀಡಿದರು ಎಂದರು.

ತಾಲೂಕಿಗೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸುವ ಬಯಕ್ಕೆ ನಮ್ಮೆಲ್ಲರದ್ದಾಗಿತ್ತು ಆದರೆ ಅವರಿಗೆ ಕಾರ್ಯದ ಒತ್ತಡ ಮತು ಸಮಯ ಅಭಾವದಿಂದ ಅದು ಸಾಧ್ಯವಾಗಲಿಲ್ಲ ಬದಲಾಗಿ ನಮ್ಮೆಲ್ಲರ ನೆಚ್ಚಿನ ಗೃಹ ಸಚಿವ ಅಮಿತ ಶಾ ಅಗಿಮಿಸುತ್ತಿದ್ದು ನಮ್ಮೆಲ್ಲರ ಸುದೈವವೆಂದ ಅವರು ಬಿಜೆಪಿ ಕೇವಲ ಭರವಸೆ ನೀಡುವುದಿಲ್ಲ ಅದಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸಿ ಅದ ಜನರಿಗೆ ತಲುಪುವಂತೆ ಮಾಡುತ್ತದೆ ಎಂದರು.

ಬಿಜೆಪಿ ಪಕ್ಷವನ್ನು ಯಾರು ತ್ಯಜಿಸಿದರು ಅದು ಅವರ ವಯಕ್ತಿಕ, ಪಕ್ಷವು ಕಾರ್ಯಕರ್ತರನ್ನೆ ನಂಬಿದೆ ಇಲ್ಲಿ ಸಮಾನ್ಯರಿಗೂ ಅವಕಾಶ ಲಭಿಸುತ್ತದೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ನಾವೆ ಅಧಿಕಾರಕ್ಕೆ ಬರುತ್ತೇವೆ ಇದರಲ್ಲಿ ಎರೆಡು ಮಾತಿಲ್ಲವೆಂದರು.

ಅರಕೇರ ತಾಲೂಕು ರಚನೆ ಜನರ ಆಸೆಯಾಗಿತ್ತು ಇದರಲ್ಲಿ ನನ್ನ ಸ್ವಾರ್ಥವಿಲ್ಲ ಮುಂಬರುವ ದಿನಗಳಲ್ಲಿ ಗಬ್ಬೂರು ಮತ್ತು ಜಾಲಹಳ್ಳಿಗೂ ತಾಲೂಕ ಆಗುವ ಅರ್ಹತೆಯಿದ್ದು ಅದು ಕಾರ್ಯರೂಪಕ್ಕೆ ಬರಬಹುದೆಂದ ಅವರು ನಾನು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದೇನೆಂದು ವಿರೋಧಿಗಳ ಆರೋಪಕ್ಕೆ ನಾನು ಉತ್ತರಿಸಬೇಕಾಗಿಲ್ಲ ನನ್ನ ಆಸ್ತಿ ವಿವರವನ್ನು ಪ್ರತಿ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಆಯೋಗಕ್ಕೆ ಸಲ್ಲಿಸುತ್ತೇನೆ ಯಾರದ್ದು ಆಸ್ತಿಗೆ ನನ್ನ ಹೆಸರು ಜೋಡಿಸಿದರೆ ನಾನು ಏನು ಮಾಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎನ್.ಶಂಕ್ರಪ್ಪ, ರಮಾನಂದ ಯಾದವ್, ತ್ರಿವಿಕ್ರಮ ಜೋಷಿ, ಬಂಡೇಶ ವಲ್ಕಂದಿನ್ನಿ, ಶಂಕರರೆಡ್ಡಿ, ರಾಜಕುಮಾರ್,ಅಮರೇಶ ಪಾಟೀಲ, ಕೆ.ಎಂ.ಪಾಟೀಲ, ಕೊಟ್ರೇಶಪ್ಪ ಕೋರಿ,ಚಿನ್ನಿ, ರಾಮಚಂದ್ರ ಕಡಗೋಲ ಸೇರಿದಂತೆ ಅನೇಕರಿದ್ದರು.

ಸಿದ್ದತೆ ಪರಿಶೀಲನೆ: ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ದವಾಗಿದ್ದು ಸುಮಾರು ೨ ಲಕ್ಷ ಜನರಿಗೆ ಕುಳಿತುಕೊಳ್ಳಲು ಆಸನ ವವಸ್ಥೆ ಮಾಡಲಾಗುತ್ತಿದ್ದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪರಿಶೀಲನೆ ನಡೆಸಿದರು. ಶಾಸಕರು ಮತ್ತು ಮುಖಂಡರೊ0ದಿಗೆ ಸಮಾಲೋಚಿಸಿದರು.