Thursday, 19th September 2024

ಅಪಘಾತಕ್ಕೀಡಾದ ಸರ್ಕಾರಿ ಬಸ್: 15 ಜನಕ್ಕೆ ಗಾಯ

ರಾಯಚೂರು : ಜಿಲ್ಲೆಯ ಮಾನ್ವಿಯಿಂದ ಸಿಂಧನೂರು ಕಡೆ ಹೊರಟಿದ್ದ ಸರ್ಕಾರಿ ka 36 F1366 ಬಸ್ ಸ್ಟೇರಿಂಗ್ ಲಾಕ್ ಆದ  ಹಿನ್ನಲೆಯಲ್ಲಿ ಸುಮಾರು 15 ಜನಕ್ಕೆ ಗಾಯಗಳಾಗಿದ್ದು ಇನ್ನುಳಿದ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಯಾವುದೇ ಸಾವುಗಳು ಆಗಿರುವುದಿಲ್ಲ.
 ಬಸ್ ಅಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು ಮಾನವಿಂದ ಹೊರಟಿದ್ದ ಬಸ್ ಕೇವಲ 30 ಟಿಕೆಟ್ ವಿತರಿಸಲಾಗಿತ್ತು ಇನ್ನು ಕೆಲವರಿಗೆ ಟಿಕೆಟ್ ವಿತರಿಸಬೇಕಾಗಿತ್ತು, ಆದರೆ ಈ ಸಂದರ್ಭದಲ್ಲಿ ಬಸ್ ಸ್ಟೇರಿಂಗ್ ಲಾಕ್ ಆದ ಹಿನ್ನೆಲೆಯಲ್ಲಿ ರಸ್ತೆ ಬದಿಯ ಇವೆಡರ್ ಒಡೆದು ವರವಲಯದಲ್ಲಿ ಉರುಳಿ ದುರಂತ ಸಂಭವಿಸಿದೆ.
 ಚಾಲಕ ಸಾದಪ್ಪ ಮತ್ತು ಟಿಕೆಟ್ ವಿತರಕ ಬೀರಪ್ಪ ಅವರು ತೆರಳುತ್ತಿದ್ದ ಈ ಒಂದು ಬಸ್ ದುರಂತಕ್ಕೆ ಹಿಡಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸಾರ್ವಜನಿಕರು ಎಲ್ಲಾ ಗಾಯಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲೆ ಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಗಾಯಾಳುಗಳನ್ನು ಜಿಲ್ಲೆಯ ರಾಯಚೂರು ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಮಾನ್ವಿ ಪೊಲೀಸ್ ಠಾಣೆಯ ಪಿ.ಐ ವೀರಭದ್ರಯ್ಯ ಸ್ವಾಮಿ ಅವರು ಪ್ರಯಾಣಕರ ದಾಖಲೆಯನ್ನು ಸಂಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *