Saturday, 14th December 2024

ರಾಜನೀತಿ ಬಿಟ್ಟು ರಾಷ್ಟ್ರ ನೀತಿ ಅನುಸರಿಸಿ: ನರೇಂದ್ರ ಮೋದಿ

ವಿದ್ಯುತ್ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ

ಕಲಬುರಗಿ: ಮುಂದಿನ 25 ವರ್ಷಗಳ ಕಾಲ ಇಂಧನ ಕ್ಷೇತ್ರದಲ್ಲಿ ಗಮನರ್ಹಾ ಸಾಧನೆಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದ್ದು, ಇಂಧನ ಕ್ಷೇತ್ರವನ್ನು ಸಶಕ್ತವನ್ನಾಗಿಸಲು ರಾಜ್ಯಗಳು ರಾಜನೀತಿ ಬಿಟ್ಟು ರಾಷ್ಟ್ರ ನೀತಿ ಅನುಸರಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದರು.

ಶನಿವಾರ ಉಜ್ವಲ ಭಾರತ ಉಜ್ವಲ ಭವಿಷ್ಯ ಇಂಧನ @2047 ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ದೆಹಲಿಯಿಂದ ವರ್ಚುವಲ್ ಮೂಲಕ ದೇಶದಾದ್ಯಂತ 100 ಜಿಲ್ಲೆಗಳ ಇಂಧನ ಇಲಾಖೆಯ ಫಲಾನುಭ ವಿಗಳನ್ನು ಉದ್ದೇಶಿಸಿ ಮತ್ತು ಆಯ್ದ 5 ಜಿಲ್ಲೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಹೀಗಾದಲ್ಲಿ ಮಾತ್ರ ಭವಷ್ಯದಲ್ಲಿ ಕತ್ತಲೆಯ ದಿನವನ್ನು ದೂರಾಗಿಸಬಹುದಾಗಿದೆ. ವಿದ್ಯುತ್ ಪೂರೈಕೆ ಮಾಡಿದ ಕಂಪನಿಗಳಿಗೆ ವಿವಿಧ ರಾಜ್ಯ ಸರ್ಕಾರಗಳು 1 ಲಕ್ಷ ಕೋಟಿ ರೂ. ಬಾಕಿ ಉಳಿಸಿಕೊಂಡಿವೆ ಎಂದರು.

ಹಸಿರು ಭವಿಷ್ಯಕ್ಕೆ ಇಂದು 5000 ಕೋಟಿ ರೂ. ಮೊತ್ತದ ಎನ್.ಟಿ.ಪಿ.ಸಿ. ಸಂಸ್ಥೆಯ ಹಸಿರು ವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಿದ್ದು, ಇಂಧನ ಮತ್ತು ಹೊಸ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಇದು ಮೈಲಿ ಗಲ್ಲಾಗಿದೆ. ಒನ್ ನೇಷನ್ ಒನ್ ಗ್ರಿಡ್ ಅಂಗವಾಗಿ ದೇಶದಾದ್ಯಂತ 1,70,000 ಕಿ.ಮಿ ಸಕ್ರ್ಯೂಟ್ ಕಿ.ಮಿ ಟ್ರಾನ್ಸಮಿಷನ್ ಲೈನ್ ಅಳವಡಿಸಿದೆ ಎಂದರು.

ಸೋಲಾರ ಬಳಸಿ, ಹಣ ಉಳಿಸಿ: ನಮ್ಮ ಸರ್ಕಾರ ಸೌರ ವಿದ್ಯುತ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿಶ್ವದ ಅಗ್ರ 5 ಹೆಚ್ಚಿನ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತ ಸ್ಥಾನ ಪಡೆದಿದೆ. ಮೇಲ್ಛಾವಣಿ ಸೋಲಾರ್ ರೂಫ್ ಟಾಪ್ ಅಳವಡಿಸುವ ಮೂಲಕ ಸಾರ್ವಜನಿಕರು ಪ್ರತಿ ಮಾಹೆ ವಿದ್ಯುತ್ ಬಿಲ್ಲು ಪಾವತಿಯ ಹಣ ಉಳಿಸಬಹುದು ಎಂದು ಸಲಹೆ ನೀಡಿದ ಅವರು ಮನೆ ಮೇಲೆ ಸೌರ ವಿದ್ಯುತ್ ಅಳವಡಿಸಿಕೊಳ್ಳುವ ಸಾರ್ವಜನಿಕರಿಗೆ ಸರ್ಕಾರದಿಂದ ಸುಳಬವಾಗಿ ಆನ್‍ಲೈನ್ ಮೂಲಕವೇ ಬ್ಯಾಂಕ್ ಖಾತೆಗೆ ಸಬ್ಸಿಡಿ ನೀಡಲು ಇಂದು ವೆಬ್ ಪೋರ್ಟಲ್ ಲೋಕಾರ್ಪಣೆ ಮಾಡಿದೆ ಎಂದರು.

5000 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ: ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 5,000 ಕೋಟಿ ರೂ. ವೆಚ್ಚದಲ್ಲಿ ತೆಲಂಗಾಣಾ, ಕೇರಳ, ಲಡಾಕ್, ರಾಜಸ್ತಾನ, ಗುಜರಾತ್ ರಾಜ್ಯದಲ್ಲಿ ಎನ್.ಟಿ.ಪಿ.ಸಿ. ಶುದ್ಧ ವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ವಿದ್ಯುತ್ ವಿತರಣಾ ಕಂಪನಿಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಆರ್ಥಿಕ ಸುಸ್ಥಿರತೆ ಸುಧಾರಿಸವ ನಿಟ್ಟಿನಲ್ಲಿ ಮುಂದಿನ 5 ವರ್ಷದಲ್ಲಿ 3,03,758 ಕೋಟಿ ರೂ. ಕ್ಕಿಂತ ಮಿಗಿಲಾದ ವಿದ್ಯುತ್ ವಿತರಣಾ ಜಾಲಗಳ ಮೂಲಸೌಕರ್ಯ ಬಲವರ್ಧನೆ ಮತ್ತು ಅಧುನೀಕರಣ ಕಾರ್ಯಕ್ಕೂ ಹಸಿರು ನಿಶಾನೆ ತೋರಿದರು. ಇದಲ್ಲದೆ ರಾಷ್ಟ್ರೀಯ ಸೌರ ಮೇಲ್ಛಾವಣಿ ವೆಬ್ ಪೋರ್ಟಲ್ ಸಹ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನು ಎನ್.ಟಿ.ಪಿ.ಸಿ. ಸಂಸ್ಥೆಯು ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಸಭಾಂಗ ಣದಲ್ಲಿ ಆಯೋಜಿಸಿತ್ತು. ಕಲಬುರಗಿ ದಕ್ಷಿಣ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ, ಸಂಸದ ಡಾ.ಉಮೇಶ ಜಿ. ಜಾಧವ, ವಿಧಾನ ಪರಿಷತ್ ಶಾಸಕ ಡಾ. ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಜೆಸ್ಕಾಮ ಎಂ.ಡಿ. ರಾಹುಲ ಪಾಂಡ್ವೆ, ಎನ್.ಟಿ.ಪಿ.ಸಿ. ಜನರಲ್ ಮ್ಯಾನೇಜರ್ ಅಲೊಕೇಶ್ ಬ್ಯಾನರ್ಜಿ, ಡಿಜಿಎಮ್ ಮತ್ತು ಕಲಬುರಗಿ ಜಿಲ್ಲಾ ನೋಡಲ್ ಅಧಿಕಾರಿ ಆರ್. ವಿನೊ ಇದ್ದರು. ಅತ್ತ ದೆಹಲಿಯಿಂದ ಕೇಂದ್ರದ ಇಂಧನ ಸಚಿವ ಆರ್.ಕೆ.ಸಿಂಗ್ ಸರ್ವರನ್ನು ಸ್ವಾಗತಿಸಿದದರೆ, ಕಾರ್ಯದರ್ಶಿ ಅಲೋಕ ಕುಮಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಬಿಜಲಿ ಉತ್ಸವದ ಈ ವರ್ಚುವಲ್ ಸಮಾರಂಭದಲ್ಲಿ ವಿವಿಧ ರಾಜ್ಯಗಳ ಗೌರವಾನ್ವಿತ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರುಗಳು, ಇತರೆ ಜನಪ್ರತಿನಿಧಿಗಳು ಭಾಗವಹಿಸಿದ್ದರು.