Wednesday, 11th December 2024

ಇಂದಿರಾನಗರ, ಕುಂದಲಹಳ್ಳಿ ರಾಮೇಶ್ವರಂ ಕಫೆಯಲ್ಲಿ ನಿಗೂಢ ಸ್ಪೋಟ

ಬೆಂಗಳೂರು: ನಗರದ ಇಂದಿರಾನಗರದಲ್ಲಿರುವ ರಾಮೇಶ್ವರಂ ಕಫೆಯಲ್ಲಿ ನಿಗೂಢ ಸ್ಪೋಟ ಉಂಟಾಗಿದೆ. ಈ ಸ್ಪೋಟದಲ್ಲಿ ಮಹಿಳೆ ಸೇರಿದಂತೆ ಐವರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರಿನ ಇಂದಿರಾ ನಗರದಲ್ಲಿರುವ ರಾಮೇಶ್ವರಂ ಕಫೆಯಲ್ಲಿ ನಿಗೂಢ ಸ್ಪೋಟ ಉಂಟಾಗಿದೆ. ಈ ಸ್ಪೋಟದಿಂದಾಗಿ ಮಹಿಳೆ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸ್ಪೋಟಕದ ಸ್ಥಳದಲ್ಲಿ ಐಡಿ ಕಾರ್ಡ್ ಗಳು ಸಿಕ್ಕಿರುವುದಾಗಿ ಹೇಳಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು, ಎಫ್‌ಎಸ್‌ಎಲ್ ತಂಡದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಲಿಂಡರ್ ಸ್ಪೋಟದಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆ ಬಗ್ಗೆ ತನಿಖೆಯ ಬಳಿಕ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.

ಬೆಂಗಳೂರಿನ ಹೆಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಲಹಳ್ಳಿಯ ಬಳಿಯಲ್ಲಿನ ರಾಮೇಶ್ವರಂ ಕಫೆ ಹೋಟೆಲ್ ಒಂದರಲ್ಲಿ ನಿಗೂಢವಾಗಿ ಸ್ಪೋಟ ಸಂಭವಿಸಿರುವುದಾಗಿ ತಿಳಿದು ಬಂದಿದೆ.

ನಿಗೂಢ ಸ್ಪೋಟದಿಂದ ಹಲವರು ಗಾಯಗೊಂಡಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವುದಾಗಿ ಹೇಳಲಾಗು ತ್ತಿದೆ. ಬೆಂಗಳೂರಿನ ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಗೂಢವಾಗಿ ಸಂಭವಿಸಿದ ಸ್ಪೋಟದ ವಿಷಯ ತಿಳಿದು, ಸ್ಥಳಕ್ಕೆ ಹೆಚ್ ಎಎಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.