ಚಿಕ್ಕಬಳ್ಳಾಪುರ: ಕೃಷಿ ಇಲಾಖೆಯೊಂದಿಗೆ ರೇಷ್ಮೆ ಮತ್ತು ತೋಟಗಾರಿಕೆ ವಿಲೀನ ಪ್ರಕ್ರಿಯೆ ಸೇರಿದಂತೆ ಸರಕಾರ ತೆಗೆದುಕೊಂಡಿ ರುವ ಯಾವುದೇ ತೀರ್ಮಾನವನ್ನು ರೈತ ಸಂಘಟನೆ ಗಳು ಎಂದಿಗೂ ಒಪ್ಪುವುದಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಮಂಜುನಾಥರೆಡ್ಡಿ ಸರಕಾರವನ್ನು ಆಗ್ರಹಿಸಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಹಾಲಿನ ಮೇಲೆ ಜಿಎಸ್ಟಿ ವಾಪಸಾತಿ,ರೇಷ್ಮೆ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ೨,೨೪೬ ಹುದ್ದೆಗಳನ್ನು ಭರ್ತಿ ಮಾಡಬೇಕು,ಹಾಲಿನ ದರ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್ಎಸ್) ಕಾರ್ಯಕರ್ತರು , ಚಂದ್ರಿಕೆ,ಹಾಲು, ರೇಷ್ಮೆಸೊಪ್ಪು ಇಟ್ಟು ನಡೆಸಿದ ವಿನೂತನ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ದರು.
ಕಾಂಗ್ರೆಸ್ ಸರ್ಕಾರ ಜಾಗತೀಕರಣ, ಉದಾರೀಕರಣ ನೀತಿಗಳನ್ನು ಜಾರಿಗೊಳಿಸಿತು. ಆ ನೀತಿಗಳನ್ನು ಬಿಜೆಪಿ ಸರ್ಕಾರ ವೇಗವಾಗಿ ಜಾರಿಗೊಳಿಸುತ್ತಿವೆ. ಇದರಿಂದ ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಹಾಲು, ರೇಷ್ಮೆ, ಹಣ್ಣು, ತರಕಾರಿ ಸೇರಿದಂತೆ ಎಲ್ಲ ವಸ್ತುಗಳು ವಿದೇಶಗಳಿಂದ ಆಮದಾಗುವಂತಾಗಿದ್ದು ದೇಶದ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಇಲ್ಲವಾಗಿ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ ಎಂದು ದೂರಿದರು.
ಇಂದು ಆದಾಯ ಕೊರತೆಯಿಂದ ಸ್ವಾಭಿಮಾನಿ ರೈತರ ಆರ್ಥಿಕ ಬದುಕಿಗೆ ಪೆಟ್ಟು ಬಿದ್ದಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ರೈತರಿಗೆ ಹನಿ ನೀರಾವರಿ ವಿಚಾರವಾಗಿ ನೀಡುತ್ತಿದ್ದ ಸಬ್ಸಿಡಿ ಯನ್ನು ಸ್ಥಗಿತಗೊಳಿಸಲಾಗಿದೆ.
ದೇಶದ ರೇಷ್ಮೆ ಉತ್ಪಾದನೆಯಲ್ಲಿ ಶೇ ೬೦ರಷ್ಟನ್ನು ರಾಜ್ಯದಲ್ಲಿಯೇ ಉತ್ಪಾದಿಸಲಾಗುತ್ತಿದೆ. ಒಂದೂವರೆ ಲಕ್ಷ ಕುಟುಂಬಗಳು ರೇಷ್ಮೆ ಉದ್ಯಮದ ಮೇಲೆ ಅವಲಂಬಿತವಾಗಿವೆ. ವಾರ್ಷಿಕ ೨,೫೦೦ ಕೋಟಿ ವಹಿವಾಟು ನಡೆಸಿ ೧,೨೫೦ ಕೋಟಿ ಜಿಎಸ್ಟಿಯು ಸರ್ಕಾರಕ್ಕೆ ಸೇರುತ್ತಿದೆ. ಆದರೂ ರೈತರ ಕಲ್ಯಾಣಕ್ಕಾಗಿ ಸರಕಾರ ಏನೂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಶು ಆಹಾರದ ಬೆಲೆ ಗಣನೀಯವಾಗಿ ಹೆಚ್ಚಿದೆ. ಆದರೆ ಹಾಲಿನ ದರ ಕಳೆದ ಮೂರು ವರ್ಷಗಳಿಂದ ಇಳಿಕೆಯಾಗಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಈ ಅನ್ಯಾಯನ್ನು ಸರಿಪಡಿಸಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಪಿ.ಮಂಜುನಾಥ ರೆಡ್ಡಿ, ಹೇಮಚಂದ್ರ, ಶ್ರೀರಾಮಪ್ಪ, ಆನಂದ್, ಆದಿನಾರಾಯಣ, ಫಾ