Friday, 13th December 2024

Road Accident: ಆಟವಾಡುತ್ತಿದ್ದಾಗ ಬೈಕ್‌ ಡಿಕ್ಕಿಯಾಗಿ 8 ವರ್ಷದ ಬಾಲಕ ಸಾವು

Shivamogga News

ಬೆಂಗಳೂರು: ರಸ್ತೆ ಬದಿ ಆಟವಾಡುತ್ತಿದ್ದಾಗ ಬೈಕ್‌ ಡಿಕ್ಕಿಯಾಗಿ 8 ವರ್ಷದ ಬಾಲಕ ಮೃತಪ್ಟಟಿರುವ ಘಟನೆ (Road Accident) ನಗರದ ಹೊರವಲಯದ ಮಹದೇವಪುರದಲ್ಲಿ ನಡೆದಿದೆ. ಪರಶುರಾಮ್ (8) ಮೃತ ಬಾಲಕ. ಮಹದೇವಪುರದ ನ್ಯೂ ಟೆಂಪಲ್ ರಸ್ತೆಯ ಬದಿಯಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ.‌ ಇದರಿಂದ ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾನೆ. ಈ ಕುರಿತು ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Pralhad Joshi: ಭಯೋತ್ಪಾದಕರನ್ನು ಕೊಲ್ಲದೆ ಬಿರಿಯಾನಿ ತಿನ್ನಿಸಬೇಕೇ?: ಫಾರೂಕ್ ಅಬ್ದುಲ್ಲಾ ವಿರುದ್ಧ ಜೋಶಿ ಕಿಡಿ

ನಟ ದುನಿಯಾ ವಿಜಯ್‌ ನೆರವಿನಿಂದ ಹೊರಬಂದವ, ಡಬಲ್‌ ಮರ್ಡರ್‌ ಮಾಡಿ ಮತ್ತೆ ಜೈಲು ಸೇರಿದ!

Duniya Vijay

ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ ದುನಿಯಾ ವಿಜಯ್‌ ಅವರ ಸಹಾಯದಿಂದ ಜೈಲಿನಿಂದ ಹೊರಗೆ ಬಂದಿದ್ದ ಆರೋಪಿಯೊಬ್ಬ, ಇದೀಗ ಜೋಡಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ಘಟನೆ (Duniya Vijay) ನಗರದಲ್ಲಿ ನಡೆದಿದೆ. ನಗರದ ಹೊರವಲಯ ಬಾಗಲೂರಿನಲ್ಲಿ ನವೆಂಬರ್ 8ರಂದು ನಡೆದ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುರೇಶ್‌ ಬಂಧಿತ ಆರೋಪಿಯಾಗಿದ್ದಾನೆ. ನವೆಂಬರ್ 8ರ ರಾತ್ರಿ ಬಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಎನ್ನುವವರ ಭೀಕರವಾಗಿ ಹತ್ಯೆಯಾಗಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸುರೇಶ್‌ ಎಂಬಾತನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಈ ಸುರೇಶ್‌ ಯಾರು ಎನ್ನುವುದರ ಹಿನ್ನೆಲೆ ಬಹಿರಂಗವಾಗಿದೆ.

ಈ ಹಿಂದೆ ಆರೋಪಿ ಸುರೇಶ್‌, ಕೊಲೆ ಹಾಗೂ ಅತ್ಯಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಈತ ಜೈಲಿನಿಂದ ಹೊರಬರಲು ಶ್ಯೂರಿಟಿ ಹಣ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಆಗ ನಟ ದುನಿಯಾ ವಿಜಯ್‌ ಅವರು ಒಂದಷ್ಟು ಅಪರಾಧಿಗಳಿಗೆ ತಲಾ 3 ಲಕ್ಷದಂತೆ ಶ್ಯೂರಿಟಿ ಹಣ ಕೊಟ್ಟು ಜೈಲಿನಿಂದ ರಿಲೀಸ್‌ ಮಾಡಿಸಿದ್ದರು.

ಜೈಲಿನಿಂದ ಹೊರಬಂದ ಬಳಿಕ ಸುರೇಶ್‌ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಮಾರ್ಕೆಟ್‌ ಪಕ್ಕದಲ್ಲಿದ್ದ ನಾಗೇಶ್ ಮತ್ತು ಮಂಜುನಾಥ್ ಎಂಬುವವರು ನೀನು ಕಳ್ಳ, ಕೊಲೆಗಾರ ಎಂದು ಸುರೇಶ್​ಗೆ ಆಗಾಗ ಹೀಯಾಳಿಸುತ್ತಿದ್ದರು ಎನ್ನಲಾಗಿದೆ. ಇದದಿಂದ ಸಿಟ್ಟಾದ ಸುರೇಶ್ ಆ ಇಬ್ಬರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿ ಸುರೇಶ್‌ನನ್ನು ಬಂಧಿಸಿದ್ದಾರೆ.