ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಸ್ವದೇಶಿ ವಿಜ್ಞಾನ ಆಂದೋಲನ-ಕರ್ನಾಟಕ ಇದರ ಮಾತೃ ವೇದಿಕೆ ಸಹಯೋಗದಲ್ಲಿ 14ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನವು ಡಿಸೆಂಬರ್ 16 ಹಾಗೂ 17ರಂದು ವಿವಿ ಆವರಣದಲ್ಲಿ ನಡೆಯಲಿದೆ.
ಡಿ.16ರಂದು ಬೆಳಗ್ಗೆ 9-30 ಗಂಟೆಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್. ಅಹಲ್ಯಾ ಸಮ್ಮೇಳನ ಉದ್ಘಾಟಿಸಲಿದ್ದಾರೆ.
‘ಸಮಾಜಕ್ಕಾಗಿ ವಿಜ್ಞಾನ’ ಎಂಬ ಧ್ಯೇಯದಡಿಯಲ್ಲಿ ನಡೆಯುವ ಈ ಸಮ್ಮೇಳನಕ್ಕೆ ದೇಶದ ನಾನಾ ಭಾಗಗಳಿಂದ ಆಗಮಿಸುವ ಮಹಿಳಾ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್ ಜಮ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನವದೆಹಲಿಯ ಎ.ಐ.ಐ.ಎಂ.ಎಸ್‌ನ ಡಾ. ಉಮಾ ಕುಮಾರ್, ಬೆಂಗಳೂರಿನ ಇಸ್ರೋ ಸಂಸ್ಥೆಯ ಖ್ಯಾತ ವಿಜ್ಞಾನಿಗಳಾದ ಡಾ. ಎನ್. ವಲರ್ಮತಿ, ಡಾ ಟಿ. ಕೆ. ಅನುರಾಧ, ತುಮಕೂರಿನ ಶೀದೇವಿ ಚಾರಿಟೆಬಲ್ ಟ್ರಸ್ಟ್ನ ಅಂಬಿಕಾ ಹುಲಿನಾಯ್ಕರ್ ಸ್ವದೇಶಿ ವಿಜ್ಞಾನ ಆಂದೋಳನದ ಅಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸ್ವದೇಶಿ ವಿಜ್ಞಾನ ಆಂದೋಲನ ಮಾತೃ ವೇದಿಕೆಯ ಕೋಶಾಧಿಕಾರಿ ಹಾಗೂ ಅಧ್ಯಕ್ಷೆ ಡಾ. ವೈ. ಎಸ್. ಗಾಯತ್ರಿ, ಉಪಾ ಧ್ಯಕ್ಷರಾದ ಡಾ. ಎ. ನಾಗರತ್ನ, ಡಾ. ಕವಿತಾ ಬಿ., ಡಾ. ಕಮಲ ಎಚ್. ಭಾಗವಹಿಸಲಿದ್ದಾರೆ.
2023ನೇ ಸಾಲಿನ ನೋಬಲ್ ಪುರಸ್ಕೃತ ಸರ್ ಸಿ. ವಿ. ರಾಮನ್ ಮಹಿಳಾ ವಿಜ್ಞಾನ ಪುರಸ್ಕಾರವನ್ನು ಬೆಂಗಳೂರಿನ ಎಡಿಇ-ಡಿಆರ್‌ಡಿಓನ ಸಹ ನಿರ್ದೇಶಕಿ, ವಿಜ್ಞಾನಿ ಡಾ. ಆಶಾ ಗರ್ಗ್ ಅವರಿಗೆ, ನೋಬಲ್ ಪುರಸ್ಕöÈತೆ ಮೇಡಂ ಮೇರಿ ಕ್ಯೂರಿ ಮಹಿಳಾ ವಿಜ್ಞಾನ ಪುರಸ್ಕಾರವನ್ನು ಬೆಂಗಳೂರಿನ ಇಸ್ರೋ-ಡಿ.ಆರ್. ಡಿ.ಓನ ಮುಖ್ಯ ಸಂಯೋಜಕಿ, ವಿಜ್ಞಾನಿ ಡಾ. ಮಣಿಮೋಳಿ ಥಿಯೋಡರ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.
ಹನ್ನೆರಡು ವಿಭಿನ್ನ ವಿಷಯಗಳ ಕುರಿತು ಸಂಶೋಧನ ಪ್ರಬಂಧಗಳ ಮಂಡನೆಯಾಗಲಿದ್ದು, ಅತ್ಯುತ್ತಮ ನಿರ್ವಹಣೆ ತೋರುವ ಪ್ರಬಂಧಕಾರರಿಗೆ ‘ಯುವ ವಿಜ್ಞಾನಿ ಪ್ರಶಸ್ತಿʼ ಹಾಗೂ ‘ಅತ್ಯುತ್ತಮ ಪ್ರಬಂಧ ಮಂಡನೆʼ ಪುರಸ್ಕಾರಗಳು ಲಭ್ಯವಾಗಲಿವೆ.
ಸಮ್ಮೇಳನದ ಸಮಾರೋಪ ಸಮಾರಂಭವು ಡಿಸೆಂಬರ್ 17ರಂದು ಮಧ್ಯಾಹ್ನ 1:30 ಗಂಟೆಗೆ ನಡೆಯಲಿದ್ದು, ಖ್ಯಾತ ವಿಜ್ಞಾನಿಗಳಾದ ಡಾ. ಎನ್. ವಲರ್ಮತಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ವದೇಶಿ ವಿಜ್ಞಾನ ಆಂದೋಲನ ಮಾತೃ ವೇದಿಕೆಯ ಕೋಶಾಧಿಕಾರಿ ಹಾಗೂ ಅಧ್ಯಕ್ಷೆ ಡಾ. ವೈ. ಎಸ್. ಗಾಯತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.