Wednesday, 11th December 2024

ಶ್ರೀ ಕೃಷ್ಣ ಒಂದು ಸಮುದಾಯಕ್ಕೆ ಸೀಮಿತವಲ್ಲ

ತುಮಕೂರು: ಶ್ರೀ ಕೃಷ್ಣ ಜನ್ಮಾಷ್ಠಮಿಯ ದಿನದಂದು ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಕ್ಕಳನ್ನು ರಾಧಾಕೃಷ್ಣರಂತೆ ಅಲಂಕರಿಸಿ ಸಂತೋಷ ಪಡುತ್ತಾರೆ ಎಂದು ತಹಶೀಲ್ದಾರ್ ಮೋಹನ್ ಕುಮಾರ್ ತಿಳಿಸಿದರು.

ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ(ಯಾದವ) ಸಂಘದ ವತಿಯಿಂದ ‘ಶ್ರೀ ಕೃಷ್ಣ ಜಯಂತಿ ಆಚರಣೆ’ ಕರ‍್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಪ್ರತಿಯೊಬ್ಬರು ಕೃಷ್ಣನನ್ನು ಆರಾಧಿಸುವು ದರಿಂದ ಎಲ್ಲ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕೃಷ್ಣನಂತೆ ಅಲಂಕರಿಸಿ ಸಂತೋಷ ಪಡುತ್ತಾರೆ. ಬೆಣ್ಣೆ ಕದ್ದ ಬೆಣ್ಣೆ ಕೃಷ್ಣ, ಮುದ್ದು ಕೃಷ್ಣ ಎಂದೆಲ್ಲ ಹಲವಾರು ಹೆಸರುಗಳಿಂದ ಗರ‍್ತಿಸಿಕೊಂಡಿದ್ದಾನೆ ಎಂದು ತಿಳಿಸಿದರು.

ಯಾದವ ಸಮುದಾಯದ ಮುಖಮಡರು ಮಾತನಾಡಿ, ಶ್ರೀ ಕೃಷ್ಣನು ಕೇವಲ ಒಂದು ಪ್ರದೇಶಕ್ಕೆ, ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಇಂದು ಎಲ್ಲ ಕಡೆ ಕೃಷ್ಣನ ಭಕ್ತರಿದ್ದು, ಕೇವಲ ಯಾದವ(ಗೊಲ್ಲ) ಸಮುದಾಯದವರಲ್ಲದೆ, ಎಲ್ಲ ಸಮುದಾಯ ದವರು ಸಹ ಕೃಷ್ಣನನ್ನು ಪೂಜಿಸುತ್ತಾರೆ. ಎಲ್ಲಿ ಅರ‍್ಮ ಇರುತ್ತದೆಯೋ ಅಲ್ಲಿ ಸತ್ಯದ ವಿರುದ್ಧ ಹೋರಾಡಲು ಶ್ರೀ ಕೃಷ್ಣ ಜನ್ಮ ತಾಳುತ್ತಾನೆ. ಅಣ್ಣ-ತಮ್ಮಂದಿರು ಹೇಗೆ ಬಾಳಬೇಕೆಂಬುದನ್ನು ತಿಳಿಸಿಕೊಟ್ಟಿದ್ದಾನೆ ಎಂದು ತಿಳಿಸಿದರು.

ಕರ‍್ಯಕ್ರಮದಲ್ಲಿ ಜಿಲ್ಲಾ ಗೊಲ್ಲರ(ಯಾದವ) ಸಂಘದ ಪಾಧಾದಿಕಾರಿಗಳು ಹಾಗೂ ಸದಸ್ಯರು, ಹಾಜರಿದ್ದರು.