ರಾಮದುರ್ಗ : ತಾಲೂಕಿನ ಗೊಡಚಿ ಗ್ರಾಮದ ಶ್ರೀ ವೀರಭದ್ರಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀ ಸಂಜಯಸಿಂಹ ಪ್ರ. ಶಿಂಧೆ ಮಹಾರಾಜರ 57 ನೇ ಜನ್ಮದಿನ ಆಚರಣೆ ಮಾಡಲಾಯಿತು.
ಗೊಡಚಿ ವೀರಭದ್ರ ದೇವಸ್ಥಾನದ ಅರ್ಚಕರು, ಗ್ರಾಮದ ಮುಖಂಡರು ಹಾಗೂ ಮಹಾರಾಜರ ಅಭಿಮಾನಿಗಳು ಜೊತೆಗೂಡಿ ಸಂಜಯ ಸಿಂಹ ಶಿಂಧೆ ಮಹಾರಾಜರ ಹುಟ್ಟು ಹಬ್ಬ ಆಚರಣೆ ಮಾಡಿದರು. ಹುಟ್ಟುಹಬ್ಬದ ನಿಮಿತ್ತ ಜೋಡೆತ್ತು ಚಕ್ಕಡಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗೊಡಚಿ ಗ್ರಾಮ ಪಂಚಾಯತಿ ಸದಸ್ಯರು, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.