Friday, 13th December 2024

ಮಹಿಳಾ ಸ್ತ್ರೀರೋಗ ತಜ್ಞೆ ಶ್ರೀಮತಿ ಮಲ್ಲಮ್ಮ ರೆಡ್ಡಿಗೆ ಸನ್ಮಾನ

ಬಸವನಬಾಗೇವಾಡಿ:  ಪಟ್ಟಣದ ಸರ್ಕಾರಿ  ಆಸ್ಪತ್ರೆಗೆ  ಕರ್ತವ್ಯಕ್ಕೆ ಹಾಜರಾಗಿರುವ    ಮಹಿಳಾ ಸ್ತ್ರೀ ರೋಗ ತಜ್ಞರಾದ ಶ್ರೀಮತಿ ಮಲ್ಲಮ್ಮ ರೆಡ್ಡಿ ಅವರನ್ನು ಬಸವ ಸೈನ್ಯ  ಕಾರ್ಯ ಕರ್ತರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ   ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾ ದಾರ್ ಮಾತನಾಡಿ, ಕಳೆದ ಒಂದು ವರ್ಷ ದಿಂದ ತಾಲೂಕ ಸಾರ್ವಜನಿಕ ಆಸ್ಪತ್ರೆಗೆ ಮಹಿಳಾ ಕಸೂತಿ ತಜ್ಞರಿಲ್ಲದೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತು.
ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಹಲವಾರು ಬಾರಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಯ ಮುಖಂಡರು ಭೇಟಿಯಾಗಿ ಮನವಿ ಸಲ್ಲಿಸಿದರು ಸಂಘಟನೆಯ ಹೋರಾಟದ ಫಲವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಹಿಳಾ ಕಸೂತಿ ತಜ್ನರು ಕರ್ತವ್ಯಕ್ಕೆ ಹಾಜರಾಗಿದ್ದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಬಸವ ಸೈನ್ಯದ ಮುಖಂಡರಾದ ನಿಂಗಪ್ಪಣ್ಣ ಅವಟಿ, ಶ್ರೀಕಾಂತ್ ಕೊಟ್ರಶೆಟ್ಟಿ, ಸುನಿಲ್ ಚಿಕ್ಕೊಂಡ, ಶಂಕರ್ ಸಿಂಗ್ ರಜಪೂತ್, ಜಟ್ಟಿರಾಯ ಮಾಲಗಾರ, ಮಾಂತೇಶ್ ಹೆಬ್ಬಾಳ, ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿ ಶಬ್ಬೀರ್ ಪಟೇಲ್ ಸುಜಾತ ಪಾಟೀಲ್ ಬಸವರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.