Friday, 13th December 2024

ಸತ್ಯಕುಮಾರ್ ರಿಲೀಪ್‌ನಿಂದ ಶವಶೈತ್ಯಾಗರ ಕೊಡುಗೆ

ತಿಪಟೂರು : ತಿಪಟೂರು ಜನತೆಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಶವ ಶೈತ್ಯಾಗಾರ (ಡೀಪ್ ಪ್ರೀಜರ್)ನ್ನು ಡಾ. ಸತ್ಯಕುಮಾರ್ ರಿಲೀಫ್ ಫಂಡ್‌ನ ಡಾ.ಶ್ರೀಧರ್ ತಿಪಟೂರು ಸಾರ್ವ ಜನಿಕ ಆಸ್ಪತ್ರೆಗೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಶ್ರೀಧರ್ ಮಾತನಾಡಿ ನಮ್ಮ ತಿಪಟೂರು ನಗರ ಹಾಗೂ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ಈ ಶವ ಶೈತ್ಯಾಗಾರನ್ನು ನೀಡಲಾಗುತ್ತದೆ. ಏಕೆಂದರೆ ಸಾವು ಹೇಳಿ ಕೇಳಿ ಬರುವುದಿಲ್ಲ, ಸಾವನ್ನಪ್ಪಿದವರ ಮಕ್ಕಳು, ಸಂಬ0ಧಿಕರು, ಸ್ನೇಹಿತರು ದೂರದ ಊರುಗಳಲ್ಲಿ ಇರುತ್ತಾರೆ ಅವರು ಬರುವ ವೇಳೆಗೆ ಅಂತ್ಯಸ0ಸ್ಕಾರವನ್ನು ಮಾಡುತ್ತಾರೆ.

ಸತ್ತವ್ಯಕ್ತಿಯ ಅಂತಿಮ ದರ್ಶನವನ್ನು ಮಾಡಲು ಸಾಧ್ಯವಾಗದಿರುವುದಕ್ಕೆ ತುಂಬಾ ಮರುಕ ಪಟ್ಟುಕೊಳ್ಳುತ್ತಾರೆ. ಮತ್ತು ಅಪಘಾತದಲ್ಲಿ, ಅಕಸ್ಮಾತಾಗಿ ಅಪರಿಚತರು ಮರಣಹೊಂದಿದ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದರು ಅವರ ಪರಿಚಯ ತಿಳಿಯುವ ವೇಳೆಗೆ ಶವವು ಕೊಳೆತಿರುತ್ತದೆ ಅದಕ್ಕಾಗಿ ಆರಕ್ಷಕರು ಪೋಟೋ ತೆಗೆದುಕೊಂಡು ಶವಸಂಸ್ಕಾರ ಮಾಡುತ್ತದೆ ಇದನ್ನು ಸಾಧ್ಯವಾದಷ್ಟು ತಪ್ಪಿಸುವ ಸಲುವಾಗಿ ಇಂದು ಶವ ಶೈತ್ಯಾಗಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಮೀರಾಶ್ರೀಧರ್, ಡಾ.ವಿವೇಚನ್, ಉದ್ಯಮಿ ಶಿವಪ್ರಸಾದ್, ನಗರಸಭಾ ಅಧ್ಯಕ್ಷ ರಾಮ್ ಮೋಹನ್, ನಿಖಿಲ್ ರಾಜಣ್ಣ, ವಿಜಯ್ ಕುಮಾರ್,ಎ.ಎಂ.ಓ ಡಾ. ಶಿವಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.