Saturday, 14th December 2024

ಪ್ರತಿಯೊಬ್ಬರೂ ದುಡಿಮೆಯಲ್ಲಿ ಸ್ವಲ್ಪ ಹಣ ಉಳಿಸಬೇಕು: ಎಂ.ಎಸ್.ಪಾಟೀಲ್

ತುಮಕೂರು: ಇತ್ತೀಚಿನ ದಿನಗಳಲ್ಲಿ ಭಾರತೀಯ ಜೀವ ವಿಮಾ ನಿಗಮದಲ್ಲಿ ಮಾನುಷ್ಯನ ಜೀವತಾವಧಿ ಕಾಲದಲ್ಲಿ ದುಡಿಮೆ ಯಲ್ಲಿ ಸ್ವಲ್ಪ ಹಣವನ್ನು ಉಳಿಸಿಬೇಕು, ಆತಂಹ ಕುಟುಂಬ ಅಥವಾ ಪಾಲಿಸಿದಾರನು ಮರಣ ಹೊಂದಿದ ನಂತರ ಆ ಸಂಸಾರ ದವರಿಗೆ ಭಾರತೀಯ ಜೀವ ವಿಮಾ ಸಂಸ್ಥೆ ಇನ್ಯೂರೆನ್ಸ್ ಕಂಪನಿಗಳು ಪಾಲಿಸಿದಾರರನು ಅವಲಂಭಿತ ಸದಸ್ಯರುಗಳಿಗೆ ಜೀವನ ನಡೆಸಲು ಅನುಕೂಲ ಮಾಡಿಕೊಡುವುದೇ ಇನ್ಯೂರೆನ್ಸ್ ಕಂಪನಿಯೇ ಜವಾಬ್ದಾರಿಯಾಗಿರುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್‌ರವರು ತಿಳಿಸಿದರು.

ನಗರದ ಶಿರಾರಸ್ತೆಯ ಶ್ರೀದೇವಿ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಬೆಂಗಳೂರಿನ ವಿಮಾ ಸಂಸ್ಥೆಯ ಸಂಯುಕ್ತಾ ಶ್ರಯದಲ್ಲಿ ಭಾರತೀಯ ವಿಮೆಯ ಬೆಳವಣಿಗೆ ಮತ್ತು ಕೊಡುಗೆ ಮತ್ತು ಇನ್ಯೂರೆನ್ಸ್ ವೃತ್ತಿ ಅವಕಾಶಗಳ ಕುರಿತು ಒಂದು ದಿನದ ವಿಚಾರ ಸಂಕಿರರ್ಣ ಕಾರ್ಯಕ್ರಮವನ್ನು ಶ್ರೀದೇವಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಅ.೨೧ ರಂದು ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಂಬೈನ ಇನ್ಯೂರೆನ್ಸ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಕಾರ್ಯ ನಿರ್ವಾಹಕ (ನಿವೃತ್ತ) ನಿರ್ದೇಶಕರು ಹಾಗೂ ಎಲ್.ಐ.ಸಿ. ಆಫ್ ಇಂಡಿಯಾದ ಬಿ.ಕೆ.ಉನ್ಹೇಲ್ಕರ್‌ರವರು ಮಾತನಾಡುತ್ತಾ ಭಾರತ ಸ್ವಾತಂತ್ರö್ಯದ ನಂತರ ವಿಮಾ ರಂಗವು ಸಾಧಿಸಿರುವ ಬೆಳವಣಿಗೆಯ ಬಗ್ಗೆ ಈ ರೀತಿ ಹತ್ತು ಹಲವಾರು ಉಪಯೋಗಗಳು ಜೀವ ವಿಮಾ ನಿಗಮ ಇನ್ಯೂರೆನ್ಸ್ ಪಾಲಿಸಿದಾರರಿಂದ ದೊರೆಯುತ್ತದೆ. ಈ ಪಾಲಿಸಿಗಳು ಯಾವ ರೀತಿ ಯೋಜನೆಗಳನ್ನು ತಯಾರು ಮಾಡುವುದರ ಬಗ್ಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್. ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್, ಟ್ರಸ್ಟಿಯಾದ ಶ್ರೀಮತಿ ಅಂಬಿಕಾ ಎಂ ಹುಲಿನಾಯ್ಕರ್‌ರವರು ಕಾರ್ಯಾ ಗಾರಕ್ಕೆ ಶುಭ ಹಾರೈಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾರತೀಯ ಹಿರಿಯ ವಿಭಾಗೀಯ ವ್ಯವಸ್ಥಾಪಕರು ಹಾಗೂ ಬೆಂಗಳೂರಿನ ಎಲ್‌ಐಸಿ ಸಂಸ್ಥೆ ಅಧ್ಯಕ್ಷರಾದ ಕೆ.ರಾಮಶೇಷಲುರವರು ಮಾತನಾಡುತ್ತಾ ಭಾರತದ ಆರ್ಥಿಕತೆಗೆ ವಿಮೆಯ ಕೊಡುಗೆ ಹಾಗೂ ಜೀವ ವಿಮಾ ವಿಭಾಗದಲ್ಲಿ ಕೆರಿಯರ್ ಬಗ್ಗೆ ವಿವರಣೆಗಳನ್ನು ನೀಡಿದರು. ಸಾಮಾನ್ಯ ವಿಮೆಯ ಸರ್ವೇಯರ್ ಆಗಿರುವ ಇವುಗಳ ಕಾರ್ಯ ವೈಖರಿಗಳನ್ನು ನೋಡಲು ನುರಿತ ತರಬೇತಿ ಹೊಂದಿದ ಸಿಬ್ಬಂದಿಗಳಿರುತ್ತವೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಎಲ್.ಐ.ಸಿ. ಆಫ್ ಇಂಡಿಯಾ ವಿಭಾಗೀಯ ಕಚೇರಿಯ ಪಿ.ಚಂದ್ರಶೇಖರ್‌ರವರು ಮಾತನಾಡುತ್ತಾ ಭಾರತೀಯ ವಿಮಾ ಕಂಪನಿಗಳಲ್ಲಿ ಸಾಕಷ್ಟು ವಿಮಾ ಕಂಪನಿಗಳಲ್ಲಿ ಹೊಂದಿದೆ. ಅದರ ಉತ್ತೇಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಬೆಂಗಳೂರಿನ ವಿಮಾ ಸರ್ವೇಯರ್ ಹಾಗೂ ನಷ್ಟ ಮೌಲ್ಯಮಾಪಕರಾದ ಕೆ.ವಿ.ಪ್ರಸಾದ್‌ ರವರು ಮಾತನಾಡುತ್ತಾ ಸಾಮಾನ್ಯ ವಿಮಾ ರಂಗದ ಬೆಳವಣಿಗೆ ಹಾಗೂ ಕೆರಿಯರ್ ಬಗ್ಗೆ ಸ್ವವಿಸ್ತಾರವಾಗಿ ವಿವರಿಸಿದರು. ವಿಮಾ ಸಂಸ್ಥಾನದ ಕೌನ್ಸಿಲ್ ಸದಸ್ಯರಾದ ಸಿ.ವಿ.ಕುಮಾರ್‌ರವರು ಭಾರತೀಯ ವಿಮಾ ಕಂಪನಿಯ ಮೂಲ ಉದ್ದೇಶವನ್ನು ವಿವರಿಸಿ ದರು.

ಶ್ರೀದೇವಿ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ಪ್ರೊ.ಮುಭಾರಕ್‌ರವರು ಭಾರತೀಯ ವಿಮೆಯ ಬೆಳವಣಿಗೆ ಮತ್ತು ಕೊಡುಗೆ ಮತ್ತು ಇನ್ಯೂರೆನ್ಸ್ ವೃತ್ತಿ ಅವಕಾಶಗಳ ಕುರಿತು ಒಂದು ದಿನದ ವಿಚಾರ ಸಂಕಿರರ್ಣದಲ್ಲಿ ತುಮಕೂರಿನ ವಿವಿಧ ಕಾಲೇಜಿನಿಂದ ಈ ಕಾರ್ಯಾಗಾರದಲ್ಲಿ ಸುಮಾರು ೧೦೦ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀದೇವಿ ಕಾಲೇಜಿನ ಆಡಳಿತಾಧಿಕಾರಿಯಾದ ಪ್ರೊ.ಟಿ.ವಿ.ಬ್ರಹ್ಮದೇವಯ್ಯರವರು ಮಾತನಾಡುತ್ತಾ ಬೆಂಗಳೂರಿನಿ೦ದ ವಿಮಾ ಇನ್ಯೂರೆನ್ಸ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಇತಂಹ ಕಂಪನಿಗಳು ಕಾರ್ಯಾಗಾರ ನಡೆಸಿರುವುದಕ್ಕೆ ವಿದ್ಯಾರ್ಥಿಗಳು ಹೆಚ್ಚು ಪ್ರಯೋಜನ ವನ್ನು ಪಡೆದುಕೊಂಡರು ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮುಂಬೈನ ಇನ್ಯೂರೆನ್ಸ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ (ನಿವೃತ್ತ) ನಿರ್ದೇಶಕರು ಹಾಗೂ ಎಲ್.ಐ.ಸಿ. ಆಫ್ ಇಂಡಿಯಾದ ಬಿ.ಕೆ.ಉನ್ಹೇಲ್ಕರ್, ಭಾರತದ ಹಿರಿಯ ವಿಭಾಗೀಯ ವ್ಯವಸ್ಥಾಪಕರು ಹಾಗೂ ಬೆಂಗಳೂ ರಿನ ಎಲ್‌ಐಸಿ ಸಂಸ್ಥೆ ಅಧ್ಯಕ್ಷರಾದ ಕೆ.ರಾಮಶೇಷಲು, ಎಲ್.ಐ.ಸಿ. ಆಫ್ ಇಂಡಿಯಾ ವಿಭಾಗೀಯ ಕಚೇರಿಯ ಪಿ.ಚಂದ್ರಶೇಖರ್, ಕೆ.ವಿ.ಪ್ರಸಾದ್, ವಿಮಾ ಸಂಸ್ಥಾನದ ಕೌನ್ಸಿಲ್ ಸದಸ್ಯರಾದ ಸಿ.ವಿ.ಕುಮಾರ್, ಗೌರವ ಕಾರ್ಯುದರ್ಶಿ ಬಿ.ಸಿ.ಶ್ರೀನಾಥ್‌ರವರಿಗೆ ಶ್ರೀದೇವಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಶ್ರೀದೇವಿ ಪದವಿ ಮತ್ತು ಸ್ನಾತಕೋತ್ತರ ಕೇಂದ್ರ ಕಾಲೇಜಿನ ಪ್ರೊ.ಚಂದ್ರಿಕಾ, ಪ್ರೊ. ಅಷಿಯಾಭಾನು, ಪ್ರೊ.ವತ್ಸಲ, ಪ್ರೊ.ಮೇಘಾ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.