Wednesday, 11th December 2024

ಪರಿಶಿಷ್ಟ ಪಂಗಡಕ್ಕೆ ಕಾಡುಗೊಲ್ಲ ಜನಾಂಗ ಸೇರ್ಪಡೆಗೆ ಬೆಂಬಲ: ಆರ್.ರಾಜೇಂದ್ರ ರಾಜಣ್ಣ

ಗುಬ್ಬಿ: ತಾಲೂಕಿನ ಹಾಗಲವಾಡಿ ಹೋಬಳಿಯ ಯಕ್ಕಲಕಟ್ಟೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರವಾಗಿ ಅನೇಕ ವರ್ಷಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು.

 ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಯಶಸ್ವಿಯಾಗಿದ್ದು ಬಿಜೆಪಿಯ ವರಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿ ಜನ ಸಂಕಲ್ಪಯಾತ್ರೆ ಮಾಡಲು ಹೊರಟಿದ್ದಾರೆ. ಹಿಂದುಳಿದ  ಜನಾಂಗ ವರ್ಗದವರನ್ನು ಕಡೆಗಣಿಸುತ್ತಿದ್ದು ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿ ಕಮಿಷನ್ ಸರ್ಕಾರವಾಗಿ ಮಾರ್ಪಟ್ಟಿದೆ. ರಾಜ್ಯದ ಜನತೆ ಸರ್ಕಾರದ ವೈಫಲ್ಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಕಿತ್ತೊಗೆಯಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್ಆರ್ ಶ್ರೀನಿವಾಸ್ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲು ಸಮುದಾ ಯವು ಮುಂದಾಗಬೇಕಿದ್ದು ಆರ್ಥಿಕವಾಗಿ ಶೈಕ್ಷಣಿಕ ವಾಗಿ ಅಭಿವೃದ್ಧಿ ಹೊಂದಿದ್ದಾರೆ ಮಾತ್ರ ಸಮುದಾಯದ ಏಳಿಗೆ ಸಾಧ್ಯವಾ ಗುತ್ತದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಗೊಲ್ಲ ಜನಾಂಗಕೆ ರಾಜಕೀಯ ಶಕ್ತಿ ತುಂಬುವಂಥ ಕೆಲಸವನ್ನು ಮಾಡಿದ್ದು ಗೊಲ್ಲರಟ್ಟಿ ಗ್ರಾಮಗಳಿಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ .ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಾಸಕರ ಅಭಿವೃದ್ಧಿ ಶೂನ್ಯ ಎಂದು ಹೇಳಿಕೆ ನೀಡುತ್ತಿರುವ ಬಣ್ಣದ ವೇಷಧಾರಿಗಳಿಗೆ ಮುಂದಿನ ಚುನಾವಣೆಯಲ್ಲಿ ತಾಲೂಕಿನ ಜನತೆ ಉತ್ತರಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕದರಯ್ಯ, ಉಪಾಧ್ಯಕ್ಷರಾದ ಮಹಾಲಕ್ಷ್ಮಿ, ಸಿದ್ದರಾಜು, ಜುಂಜೆ ಗೌಡ, ಸದಾಶಿವಯ್ಯ, ಕಕ್ಕೆ ನಳ್ಳಿ ಮಂಜಣ್ಣ ಚೇಳೂರು ಹಟ್ಟಿ ಶಿವಣ್ಣ, ಗುರುಲಿಂಗಯ್ಯ, ದೊಡ್ಡಯ್ಯ, ಶ್ರೀನಿವಾಸ್,  ಮಲ್ಲಿಕಾ ರ್ಜುನ ಸ್ವಾಮಿ, ರಾಘವೇಂದ್ರ, ಮಂಚಲದೊರೆ ರಮೇಶ್, ತೀರ್ಥ ಪ್ರಸಾದ್, ಚಿತ್ರ ಲಿಂಗಯ್ಯ, ಗೌಡಯ್ಯ, ಸಿದ್ದಪ್ಪ, ಉಮೇಶ್, ಮೋಹನ್, ಚಂದ್ರಣ್ಣ, ಕಮಲಮ್ಮ ಹಾಗೂ 18 ಗೊಲ್ಲರಟ್ಟಿ ಗ್ರಾಮದ ಮುಖಂಡರು ಹಾಜರಿದ್ದರು.