Wednesday, 11th December 2024

ದ್ವಿತೀಯ ಪಿಯುಸಿ ಫಲಿತಾಂಶ: ಶೇ.೯೭ರಷ್ಟು ವಿದ್ಯಾರ್ಥಿಗಳ ಸಾಧನೆ‌

ಶಿರಸಿ: ತಾಲೂಕಿನ ಯಡಹಳ್ಳಿಯ ವಿದ್ಯೋದಯ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ.೯೭ರಷ್ಟು ವಿದ್ಯಾರ್ಥಿಗಳು ಸಾಧನೆ‌ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೇ.೯೮, ಕಲಾ ವಿಭಾಗದಲ್ಲಿ ಶೇ.೯೩ ಸಾಧನೆ ಆಗಿದ್ದು, ಪ್ರಥಮ ಸ್ಥಾನವನ್ನು ನಾಗಶ್ರೀ ಶ್ರೀಧರ ಹೆಗಡೆ (೯೮.೧೭), ದ್ವಿತೀಯ ಸ್ಥಾನವನ್ನು ಅಶುತೋಷ ರಾಮಕೃಷ್ಣ ಭಟ್ಟ (೯೭.೫೦), ಮೇಘಾ ಗಜಾನನ ಹೆಗಡೆ (೯೭.೫೦), ತೃತೀಯ ಭೂಮಿಕಾ ಹೆಗಡೆ (೯೭.೧೭) ಸಾಧನೆ ‌ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ಜಲಯಕ್ಷ್ಮೀ ನಾರಾಯಣ ಗೌಡ (೮೯.೫೦) ಪ್ರಥಮ, ದಿವ್ಯಾ ಉಮೇಶ ಹೆಗಡೆ( ೮೬.೧೭) ದ್ವಿತೀಯ, ದರ್ಶನ ಮಾ.ಗೌಡ (೮೦.೬೭) ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯ ಆರ್.ಟಿ.ಭಟ್ಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.