Monday, 4th November 2024

ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ೧೦೧ ಬಡ ಹೆಣ್ಣು ಮಕ್ಕಳಿಗೆ ಸೀಮಂತ

ತುಮಕೂರು: ಸಮೃದ್ಧಿ ಸೇವಾ ಟ್ರಸ್ಟ್ ಹೆಗ್ಗೆರೆ ಇವರವತಿಯಿಂದ ಜುಲೈ ೨೯ರ ಶುಕ್ರವಾರ ಹೆಗ್ಗೆರೆಯ ಬಾಲಾಜಿ ಕಲ್ಯಾಣ ಮಂಟಪ ದಲ್ಲಿ ೧೦೧ ಬಡ ಹೆಣ್ಣು ಮಕ್ಕಳಿಗೆ ಸೀಮಂತ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟನ ಅಧ್ಯಕ್ಷೆ ಶಾಂತಕುಮಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಳ್ಳವರ ಕುಟುಂಬಗಳಲ್ಲಿ ಮದುವೆ, ಸೀಮಂತ ಇನ್ನಿತರ ಸಾಂಪ್ರದಾಯಿಕ ಕರ‍್ಯರ‍್ಮಗಳು ಬಹಳ ಅದ್ದೂರಿಯಾಗಿ ನಡೆಯುತ್ತವೆ.ಆದರೆ ಬಡವರ ಮನೆಗಳಲ್ಲಿ ಇಷ್ಟು ಅದ್ದೂರಿಯಾಗಿ ಮಾಡಲು ಸಾಧ್ಯವಿಲ್ಲವೆಂಬ ಕೊರಗು ಅವರನ್ನು ಕಾಡುತ್ತಿರುತ್ತದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದಾನಿಗಳ ಸಹಕಾರ ದೊಂದಿಗೆ ಈ ಸಾಮೂಹಿಕ ಸೀಮಂತ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡವರ ಮನೆಯ ಹೆಣ್ಣು ಮಕ್ಕಳಿಗೆ ಅವರ ಅಣ್ಣ, ತಮ್ಮ, ತಂದೆ, ತಾಯಿ, ಗುರು, ಹಿರಿಯರ ಸ್ಥಾನದಲ್ಲಿ ನಿಂತು ಸೀಮಂತ ಕಾರ‍್ಯಕ್ರಮ ನೆರವೇರಿಸಲಿದ್ದೇವೆ ಎಂದರು.

ಬಡವರ ಮನೆಯ ೧೦೧ಜನ ಹೆಣ್ಣು ಮಕ್ಕಳಿಗೆ ಹುಡಿ ತುಂಬುವ ಈ ಸಾಮೂಹಿಕ ಸೀಮಂತ ಕರ‍್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದು,ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಕರ‍್ಯಕ್ರಮವನ್ನು ರ‍್ನಾಟಕ ಹೈಕರ‍್ಟಿನ ನಿವೃತ್ತ ನ್ಯಾಯಾಧೀಶರಾದ ಅರಳಿ ನಾಗರಾಜು ಉದ್ಘಾಟಿಸಲಿದ್ದು, ಜೀನಿ ಸಂಸ್ಥೆಯ ಜಗದೀಶ್ಬಾಬು ಸೇರಿದಂತೆ ಹಲವರು ಈ ಕರ‍್ಯಕ್ರಮದಲ್ಲಿ ಉಪಸ್ಥಿತರಿರುವರು.

ಕಾರ‍್ಯಕ್ರಮದಲ್ಲಿ ವಿಶೇಷವಾಗಿ ಜನಪದ ಕಲಾವಿದರಾದ ಮೋಹನ್ ಕುಮಾರ್ ಮತ್ತು ತಂಡದವರಿಂದ ಸೋಬಾನೆ ಮತ್ತು ತತ್ವ ಪದಗಳ ಗಾಯನ ವಿರುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂವೃದ್ದಿ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಹೆಚ್.ಸಿ.ನಂಜಪ್ಪ, ಕರ‍್ಯರ‍್ಶಿ ಶಶಾಂಕ ಹೆಚ್.ಎನ್, ಜಾನಪದ ಕಲಾವಿದ ಮೋಹನ್ ಕುಮಾರ್ ಉಪಸ್ಥಿತರಿದ್ದರು.