Saturday, 14th December 2024

ಚಿಮ್ಮಚೋಡ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ

ಚಿಂಚೋಳಿ: ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಚಿಮ್ಮನಚೋಡ ಶಾಲೆಯ  ಕು. ಗೌರಿಶಂಕರ ವೀರಯ್ಯಸ್ವಾಮಿ ಮತ್ತು ಕು. ಪೂಜಾ ಅನವೀರಯ್ಯ ಎಂಬ ವಿದ್ಯಾರ್ಥಿಗಳು ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯಗುರು ಚಂದ್ರಕಲಾ ತಿಳಿಸಿದ್ದಾರೆ.

ನಮ್ಮ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಮಟ್ಟದ ಶಿಕ್ಷಣವನ್ನು ಪಡೆದುಕೊಂಡು ತಾಲೂಕ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ನಮ್ಮ ಚಿಮ್ಮನಚೋಡ ಗ್ರಾಮಕ್ಕೆ ಹಾಗೂ ಶಾಲೆಗೆ ವಿದ್ಯಾರ್ಥಿಗಳು ಕೀರ್ತಿ ತಂದುಕೊಟ್ಟಿರುವುದು ತುಂಬಾ ಖುಷಿತಂದಿದೆ ಎಂದು ಶಾಲಾ ಆಡಳಿತ ಸಿಬ್ಬಂದಿ ವರ್ಗ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾರುತಿ ಮದರಗಿ, ಉಪಾಧ್ಯಕ್ಷ ಸಂಗಪ್ಪ ಮತ್ತು ಸದಸ್ಯರು ತಿಳಿಸಿದರು.

ಈ ಸಂಧರ್ಭದಲ್ಲಿ ಶಿಕ್ಷಕಿಯರಾದ ಜ್ಞಾನೇಶ್ವರಿ, ಜ್ಯೋತಿ, ರಂಜಿತಾ, ಶಿಕ್ಷಕ ಹೈದರ ಅಲಿ, ಸುನೀಲ್ ಕಂದಿ, ಮೋಹನ್, ಸಕೀನಾ, ಶಿಲ್ಪಾ, ಫಿರ್ದೋಸ್ ಅವರು ಇದ್ದರು.