ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕು ವಕೀಲರ ಸಂಘದ ೨ ವರ್ಷದ ಅವಧಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಆರ್.ಶ್ರೀನಿವಾಸ್ ನೂತನ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.
ಅಧ್ಯಕ್ಷ , ಉಪಾಧ್ಯಕ್ಷ ,ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ತಲಾ ಮೂವರು, ಜಂಟಿ ಕಾರ್ಯ ದರ್ಶಿ ಹಾಗೂ ಖಜಾಂಚಿ ಸ್ಥಾನಕ್ಕೆ ತಲಾ ಇಬ್ಬರು, ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ೧೦ ಮಂದಿ ಸೇರಿ ಒಟ್ಟು ೨೩ ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಕಣ ದಲ್ಲಿದ್ದರು. ಅಧ್ಯಕ್ಷ ಸ್ಥಾನದ ಕಣದಲ್ಲಿದ್ದ ಜಿ.ಆರ್.ಹರಿಕುಮಾರ್ ೫೦ ಮತ ಪಡೆದರೆ, ಕೆ.ಉಮೇಶ್ ೪೬ ಮತ ಪಡೆಯಲು ಶಕ್ಯರಾದರೆ ಇವರ ಪ್ರತಿಸ್ಪರ್ಧಿ ಆರ್.ಶ್ರೀನಿವಾಸ್ ೧೭೧ ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಗೊಂಡರು.
ಅದರಂತೆ ಉಪಾಧ್ಯಕ್ಷರಾಗಿ ಬಿ.ವಿನೋದ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಂ.ಮುರುಳಿ ಮೋಹನ್ ೧೨೧, ಜಂಟಿ ಕಾರ್ಯದರ್ಶಿಯಾಗಿ ಕೆ.ವಿ.ಅಭಿಲಾಷ್ ೧೮೯, ಖಜಾಂಚಿಯಾಗಿ ಜಿ.ಎಸ್.ಹರಿಕೃಷ್ಣ ೧೪೪ ಮತ ಪಡೆದು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ನವೀನ್ ಕುಮಾರ್, ಪಿ.ಬಿ.ಸೀತಾರಾಮ್, ಕೆ.ಎನ್.ಶಿವಪ್ಪ, ಜಹೀರ್, ಮುನಿರಾಜು ಆಯ್ಕೆ ಯಾಗಿದ್ದು, ತಹಸೀಲ್ದಾರ್ ಗಣಪತಿ ಶಾಸ್ತ್ರಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.