ತುಮಕೂರು: ಬಡವರು ಅರ್ಥಿಕ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಕಲ್ಪಿಸಿದ್ದು ಮಾಜಿ ಪ್ರಧಾನಿ ಇಂದಿರಾಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಕೆಂಚಮಾರಯ್ಯ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಇಂದಿರಾಗಾಂಧಿ ಅವರ 39ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡು ತಿದ್ದ ಅವರು,ಪೂರ್ವ ಪಾಕಿಸ್ಥಾನದ ಪರವಾಗಿ ನಿಂತು,ಭೂ ಸೇನೆಯ ಜನರಲ್ ಮಾಣಿಕ್ ಷಾ ಅವರಿಗೆ ಆದೇಶ ನೀಡಿ, ಬಾಂಗ್ಲಾದೇಶ ಉದಯಕ್ಕೆ ಕಾರಣವಾಗಿದ್ದಾರೆ ಎಂದರು.
ಹಿರಿಯರಾದ ರೆಡ್ಡಿ ಚಿನ್ನಯಲ್ಲಪ್ಪ ಮಾತನಾಡಿ,ಇಂದಿರಾಗಾಂಧಿ ಅವರಿಗೆ ತ್ಯಾಗದಲ್ಲಿ ಯಾರು ಸರಿಸಾಟಿಯಿಲ್ಲ.ದೇಶದ ಐಕ್ಯತೆ ಮತ್ತು ಭದ್ರತೆಗಾಗಿ ಜೀವವನ್ನೇ ಬಲಿಕೊಟ್ಟರು. ನಾವು ಸಹ ಹಿಂದೂ ನಾವೆಲ್ಲ ಒಂದು ಎಂದು ಒಪ್ಪಿಕೊಳ್ಳಲು ಸಿದ್ದ ಎಂದರು.
ಕೆಪಿಸಿಸಿ ರಾಜ್ಯ ವಕ್ತಾರ ನಿಕೇತ್‌ರಾಜ್ ಮೌರ್ಯ ಮಾತನಾಡಿ,ಇಂದಿರಾಗಾಂಧಿ ಈ ದೇಶದ ಜನರ ಪಾಲಿಕೆ ತಾಯಿ ಇದ್ದಂತೆ. ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಬಿಜೆಪಿಯವರು, ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಇರುವ ಸರಕಾರಿ ಶಾಲೆ, ಆಸ್ಪತ್ರೆ,ಪ್ರತಿ ಮಗುವಿಗೆ ಕೊಡಿಸಿದ ಪೊಲೀಯೋ ಲಸಿಕೆ ಇವುಗಳನ್ನು ಬಿಟ್ಟು ಮಾತನಾಡಲಿ.ಈ ದೇಶದ ಜನರಿಗೆ ಸಮಾನತೆ ಎಂಬುದು ದೊರೆತಿದ್ದೇ ಕಾಂಗ್ರೆಸ್ ಆಡಳಿತದಲ್ಲಿ. ದೇಶದ ಅಖಂಡತೆಯನ್ನು ಉಳಿಸಿಕೊಳ್ಳಲು, ಪ್ರತ್ಯೇಕ ಖಲಿಸ್ಥಾನ ನಿರ್ಮಾಣಕ್ಕೆ ಅವಕಾಶ ಕೊಡದ ಕಾರಣ ಅಂಗರಕ್ಷಕರಿAದಲೇ ಸಾವಿಗೀಡಾಬೇಕಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ದೇಶದ ಚುಕ್ಕಾಣಿ ಹಿಡಿದ ಇಂದಿರಾಗಾಂಧಿ,ಭಾರತವಲ್ಲದೇ, ಪ್ರಪಂಚದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿದವರು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ರಾಮಕೃಷ್ಣ,ಅತೀಕ್ ಅಹಮದ್,ಹೆಚ್.ಸಿ.ಹನುಮಂತಯ್ಯ, ಅಸ್ಲಾಂಪಾಷ, ಇಕ್ಬಾಲ್ ಅಹಮದ್, ರಾಯಸಂದ್ರ ರವಿಕುಮಾರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಸೈಯದ್ ಫಯಾಜ್, ನಯಾಜ್ ಅಹಮದ್, ನಾಗೇಶಬಾಬು, ಅಪ್ತಾಬ್ ಅಹಮದ್, ವಾಲೆಚಂದ್ರು, ಮಹೆಬೂಬ್ ಪಾಷ, ಆಟೋ ರಾಜು, ಸುಜಾತ, ನಾಗಮಣಿ, ಮುಬೀನಾ, ಸೇವಾದಳದ ಸುಮ, ನಟರಾಜ್, ಗ್ರಾಮಾಂತರ ಬ್ಲಾಕ್‌ನ ನರಸಿಂಹಮೂರ್ತಿ, ಕೆಂಪಣ್ಣ, ನರಸಿಂಹರಾಜು.ಎ.ಡಿ,ದೀಪು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.