Friday, 13th December 2024

ವೃತ್ತ ನಿರೀಕ್ಷಕರಿಗೆ ಬೀಳ್ಕೋಡುಗೆ ಸಮಾರಂಭ

ತಿಪಟೂರು: ಚುನಾವಣಾ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಸಮಯದಲ್ಲಿ ತಾಲ್ಲೂಕಿನ ಜನತೆಗೆ ನಿಸ್ವಾರ್ಥವಾಗಿ ಹಾಗೂ ಪ್ರಾಮಾಣಿಕನಾಗಿ ಕಾಯಕವನ್ನು ಮಾಡಿದ್ದೇನೆ ಎಂದು ನಗರ ಪೋಲೀಸ್ ವೃತ್ತ ನಿರೀಕ್ಷಕ ಮಾರ್ಕಂಡೇಯ ತಿಳಿಸಿದರು.

ನಗರದ ಖಾಸಗಿ ಹೊಟೆಲ್‌ನಲ್ಲಿ ಬಯಲುಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವರ್ಗಾವಣೆಗೊಂಡ ವೃತ್ತ ನಿರೀಕ್ಷಕರಿಗೆ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು.

ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರಿಗೆ ಸೇವೆ ನೀಡಲು ದಿನದ 24 ಗಂಟೆಗಳ ಕಾಲ ಸದಾ ಸಿದ್ದರಿದ್ದು ಒಮ್ಮೊಮ್ಮೆ ಕುಟುಂಬದ ಬಾಂಧವ್ಯವನ್ನು ಮರೆತು ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದ್ದು ಅಂತಹ ಸಮಯದಲ್ಲಿ ನಾನು ಮತ್ತು ನಮ್ಮ ತಂಡವು ತಿಪಟೂರಿನ ಮಹಾಜನತೆಗೆ ಸ್ವಂದಿಸಿದ್ದೇವೆ, ಅದೇ ರೀತಿಯಲ್ಲಿ ಸಾರ್ವಜನಿಕರು ಸಹ ಸಹಕಾರ ನೀಡಿದ ಪರಿಣಾಮವಾಗಿ ಹಲವಾರು ಪ್ರಕರಣಗಳನ್ನು ಬೇಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಬಯಲುಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘದ ಸದಸ್ಯ ಕೆ.ಎಮ್ ರಾಜಣ್ಣ ಮಾತನಾಡಿ ನಮ್ಮ ಸಂಘವು ಸಮಾಜವೂ ಸಹ ನನ್ನ ಕುಟುಂ¨ ಎಂದು ತಿಳಿದುಕೊಂಡು ತಮ್ಮ ಇಲಾಖೆಯ ಕರ್ತವ್ಯದ ಜೊತೆಗೆ ವಿವಿಧ ಮಾನವೀಯತೆಯ ಮೌಲ್ಯಗಳನ್ನು ರೂಢಿಸಿಕೊಂಡು ನೊಂದವರಿಗೆ ಸಹಾಯ ಮಾಡುತ್ತಾ ಸಮಾಜ ಸೇವೆಯನ್ನು ಮಾಡುವ ವ್ಯಕ್ತಿಗಳಿಗೆ ಸನ್ಮಾನಿಸಿ ವುದು ನಮ್ಮ ಸಂಘದ ಉದ್ದೇಶವಾಗಿದ್ದು ಅದರಂತೆ ಚುನಾವಣೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅಸ್ವಾದ ನೀಡದೆ ಕೆಲಸ ನಿರ್ವಹಿಸಿದ್ದ ಹಾಗೂ ಜಾನುವಾರುಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ನಗರ ಪೋಲೀಸ್ ವೃತ್ತ ನಿರೀಕ್ಷಕ ಮಾರ್ಕಂಡೇಯವರಿಗೆ ಸನ್ಮಾನಿ ಸಿದ್ದು ಸೇವೆ ಮತ್ತೋಷ್ಟು ಗೌರವ ಹೆಚ್ಚಾಗಿದೆ ಎಂದರು.

ಸಮಾರ0ಭದ ಅದ್ಯಕ್ಷತೆಯನ್ನು ಸಂಘದ ಅದ್ಯಕ್ಷ ಲಾಯರ್ ನಾಗರಾಜು ವಹಿಸಿದ್ದು, ಸಂಘದ ಪ್ರಧಾನ ಕಾರ್ಯದರ್ಶಿ ಬಾನುಪ್ರಶಾಂತ್, ಸದಸ್ಯರಾದ ಪ್ರಗತಿಪರ ಚಿಂತಕ ಉಜ್ಜಜ್ಜಿ ರಾಜಣ್ಣ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಕುಮಾರಸ್ವಾಮಿ, ಹಳೇಪಾಳ್ಯದ ಸದಣ್ಣ, ಸ್ವಾಮಿ, ಕೀರ್ತಿ, ದೀಪು, ಮೂರ್ತಿ, ಮತ್ತಿತ್ತರು ಹಾಜರಿದ್ದರು.