Saturday, 14th December 2024

ಕೇಂದ್ರ ಸರಕಾರ ಸೋನಿಯಾಗಾಂಧಿಗೆ ಕಿರುಕುಳ ನೀಡುತ್ತಿದೆ

ತುಮಕೂರು: ಬೆಲೆ ಹೆಚ್ಚಳ, ನಿರುದ್ಯೋಗ ಸಮಸ್ಯೆ, ರ‍್ಥಿಕ ಕುಸಿತದಂತಹ ವಿಷಯಗಳಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಕೇಂದ್ರ ಸರಕಾರ ಇಡಿ ಮೂಲಕ ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯ ಗಾಂಧಿ ಅವರಿಗೆ ವಿಚಾರಣೆಗಾಗಿ ನೋಟೀಸ್ ನೀಡಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯ ವೇಳೆ ಮಾತನಾಡಿದ ಅವರು, ದೇಶದಲ್ಲಿ ಬಡತನ, ನಿರುದ್ಯೋಗ, ಹಸಿವು ತಾಂಡವವಾಡುತ್ತಿದೆ. ಅಪೌಷ್ಟಿಕತೆಯಿಂದ ಹಿಂದೆಂಗಿಂತಲೂ ಹೆಚ್ಚು ಜನರು ಬಳಲುತಿದ್ದಾರೆ.ತನ್ನ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಈಗಾಗಲೇ ಮುಚ್ಚಿ ಹೋಗಿ ರುವ ಕೇಸನ್ನು ರೀ ಓಪನ್ ಮಾಡಿ, ಅನಗತ್ಯ ತೊಂದರೆ ನೀಡುತ್ತಿದೆ ಎಂದರು.

ಇಂಧನ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು, ಅದರಲ್ಲಿಯೂ ಮಧ್ಯಮರ‍್ಗದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ .ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳದ ಫಲವಾಗಿ ಅಡುಗೆ ಎಣ್ಣೆ,ಅಡುಗೆ ಅನಿಲ, ಅಕ್ಕಿ ಸೇರಿದಂತೆ ಆಹಾರ ಪದರ‍್ಥಗಳ ಬೆಲೆ ಹೆಚ್ಚಳವಾಗಿದ್ದು,ಬಡವರು,ಕೂಲಿ ಕರ‍್ಮಿಕರು ಬದುಕುವುದೇ ಕಷ್ಟವಾಗಿದೆ. ಇಂತಹ ಸಂರ‍್ಭದಲ್ಲಿ ಜನಸಾಮಾನ್ಯರ ನೆರವಿಗೆ ಬರಬೇಕಾದ ಸರಕಾರ ಆಹಾರ ಪದರ‍್ಥಗಳ ಮೇಲು ಜಿ.ಎಸ್.ಟಿ ವಿಧಿಸಿ,ಗಾಯದ ಮೇಲೆ ಬರೆ ಎಳೆದಿದೆ.

ಈ ವಿಚಾರಗಳಲ್ಲಿ ಎಲ್ಲಿ ವಿರೋಧಪಕ್ಷಗಳು,ಜನರು ಸರಕಾರದ ವಿರುದ್ದ ತಿರುಗಿ ಬೀಳುತ್ತಾರೋ ಎಂಬ ಹೆದರಿಕೆ ಯಿಂದ ಕಾಂಗ್ರೆಸ್ ಮುಖಂಡರ ವಿರುದ್ದ ಇಡಿ,ಐಟಿ,ಸಿಬಿಐ ಸಂಸ್ಥೆಗಳನ್ನು ಅಸ್ತçವಾಗಿ ಬಳಕೆ ಮಾಡುತ್ತಿದೆ.ಇದರ ವಿರುದ್ದ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕರ‍್ಯರ‍್ತರು ಮೌನ ಪ್ರತಿಭಟನೆ ನಡೆಸುತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ನ್ಯಾಷನಲ್ ಹೆರಾಡ್ಲ್ ಪ್ರಕರಣಕ್ಕೆ ಈಗಾಗಲೇ ಐಟಿ ಟ್ರುಬ್ಯನಲ್, ಚುನಾವಣಾ ಆಯೋಗದಲ್ಲಿ ಸಂಪರ‍್ಣವಾಗಿ ತೆರೆಬಿದ್ದಿದೆ. ಸ್ವತಃ ಮಾಜಿ ಹಣಕಾಸು ಮಂತ್ರಿ ಅರುಣ್ಜಟ್ಲಿ ಅವರು ಸಂಸತ್ ಅಧಿವೇಶನದಲ್ಲಿಯೇ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದರು ಸಹ,ಕಾಂಗ್ರೆಸ್ ನೇತೃತ್ವ ವಹಿಸಿರುವ ರಾಹುಲ್ಗಾಂಧಿ, ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡಲಾಗಿದೆ. ೧೫ ದಿನಗಳ ಹಿಂದೆಯೇ ಸುಮಾರು ೫೦ ಗಂಟೆ ವಿಚಾರಣೆ ನಡೆಸಿದ್ದು,ಅದರ ವರದಿ ಹೊರಬಂದಿಲ್ಲ.ಕಳೆದ ಎರಡು ದಿನಗಳಿಂದ ಸೋನಿಯಗಾಂಧಿ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಯಾವುದೇ ಮಾಹಿತಿ ಇಲ್ಲ. ನಿನ್ನೆ ಮತ್ತು ಇಂದು ಡಿಕೇಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರಜಾಸತ್ತಾತ್ಮಕ ವಿಚಾರಣೆಗೆ ನಮ್ಮ ವಿರೋಧವಿಲ್ಲ,ಅನಗತ್ಯ ಕಿರುಕುಳ ನೀಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಸಿ.ಹನುಮಂತಯ್ಯ, ಶಿವಾಜಿ, ಶ್ರೀನಿವಾಸಕುಮಾರ್, ಸಿಮೆಂಟ್ ಮಂಜು ನಾಥ್, ಆಟೋ ರಾಜು, ನಟರಾಜಶೆಟ್ಟಿ, ಸುರ‍್ಣಾದೇವಿ, ಸುಜಾತ, ಕೃಷ್ಣಪ್ಪ, ಡಾ.ಇಂತಿಯಾಜ್ ಅಹಮದ್, ಸಂಜೀವಕುಮಾರ್, ಮರಿಚನ್ನಮ್ಮ, ಹಿದಾಯತ್, ಕೆಂಪಣ್ಣ,ಕುಮಾರಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.