Friday, 20th September 2024

ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಓಡಾಟ ಆ.4ರವರೆಗೆ ಬಂದ್‌

ಹಾಸನ/ಮೈಸೂರು: ಕಳೆದ ಜು.27ರಂದು ಹಾಸನ ಜಿಲ್ಲೆಯ ಮಲೆನಾಡು ‌ಭಾಗದಲ್ಲಿ ಮಳೆಯ ಆರ್ಭಟಕ್ಕೆ ಶಿರಾಡಿ ಘಾಟಿಯ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿತ್ತು. ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದ ಪರಿಣಾಮ ರೈಲು ಓಡಾಟ ಬಂದ್‌ ಆಗಿದೆ.

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಯಡಕುಮೇರಿ ಮತ್ತು ಕಡಗರವಳ್ಳಿ ವಿಭಾಗದ ನಡುವೆ ಭೂಕುಸಿತ ಸಂಭವಿಸಿದ ಕಾರಣಕ್ಕೆ ಆ.4ರವರೆಗೆ 14 ರೈಲುಗಳ ಓಡಾಟ ರದ್ದುಪಡಿಸಲಾಗಿದೆ.

ರೈಲುಗಳ ಓಡಾಟ ಸ್ಥಗಿತವಾಗಿದೆ ಎಂಬುದರ ಮಾಹಿತಿ ಇಲ್ಲಿದೆ..

  1. ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು – ಕಣ್ಣೂರು ರೈಲು ಜು. 29 ರಿಂದ ಆ.03ರವರೆಗೆ ರದ್ದು
  2. ರೈಲು ಸಂಖ್ಯೆ 16512 ಕಣ್ಣೂರು – ಕೆಎಸ್‌ಆರ್ ಬೆಂಗಳೂರು 30.07.2024 ರಿಂದ 04.08.2024 ರದ್ದು
  3. ರೈಲು ಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು – ಕಾರವಾರ 29.07.2024 ರಿಂದ 03.08.2024 ರದ್ದು
  4. ರೈಲು ಸಂಖ್ಯೆ 16596 ಕಾರವಾರ – ಕೆಎಸ್‌ಆರ್ ಬೆಂಗಳೂರು 30.07.2024 ರಿಂದ 04.08.2024 ರದ್ದು
  5. ರೈಲು ಸಂಖ್ಯೆ 16585 SMVT ಬೆಂಗಳೂರು – ಮುರ್ಡೇಶ್ವರ 29.07.2024 ರಿಂದ 03.08.2024 ರದ್ದು
  6. ರೈಲು ಸಂಖ್ಯೆ 16586 ಮುರ್ಡೇಶ್ವರ – SMVT ಬೆಂಗಳೂರು 30.07.2024 ರಿಂದ 04.08.2024 ರದ್ದು
  7. ರೈಲು ಸಂಖ್ಯೆ 07377 ವಿಜಯಪುರ – ಮಂಗಳೂರು ಕೇಂದ್ರ 29.07.2024 ರಿಂದ 03.08.2024 ರದ್ದು

 

  1. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ 30.07.2024 ರಿಂದ 04.08.2024 ರದ್ದು
  2. ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ 29.07.2024, 31.07.2024 & 02.08.2024 ರದ್ದು
  3. ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ 30.07.2024, 01.08.2024 &03.08.2024 ರದ್ದು
  4. ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ 30.07.2024 ಮತ್ತು 01.08.2024 ರದ್ದು
  5. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ – ಯಶವಂತಪುರ 31.07.2024 ಮತ್ತು 02.08.2024 ರದ್ದು
  6. ರೈಲು ಸಂಖ್ಯೆ 16539 ಯಶವಂತಪುರ – ಮಂಗಳೂರು ಜಂಕ್ಷನ್ 03.08.2024 ರದ್ದು
  7. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ 04.08.2024 ರದ್ದು