Sunday, 6th October 2024

Shivamogga News: ಡೊಳ್ಳು ಬಾರಿಸುವ ಬದಲು ಎದುರಾಳಿ ಗುಂಪಿಗೆ ಬಾರಿಸಿದರು! ಗಣಪತಿ ವಿಸರ್ಜನೆ ಗಲಾಟೆ

shivamogga news

ಶಿವಮೊಗ್ಗ: ಹಳೆಯ ವೈಷಮ್ಯದಿಂದ ಗಣಪತಿ ವಿಸರ್ಜನೆ (Ganesh Chaturthi) ಮೆರವಣಿಗೆ (ganesh idol immersion) ಎರಡು ಗುಂಪುಗಳ ಮಾರಾಮಾರಿಯ ಸನ್ನಿವೇಶ ಆಗಿ ಮಾರ್ಪಟ್ಟ ಘಟನೆ ಶಿವಮೊಗ್ಗ (Shivamogga News) ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಅರಬಿಳಚಿ ಕ್ಯಾಂಪ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ದಿ. ಅಣ್ಣಾಮಲೈ ಮಗ ಅರ್ಜುನ್ ಮೇಲೆ ಹಲ್ಲೆಯಾಗಿದ್ದು ಗಾಯಾಳು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ಜಗಳ ಬಿಡಿಸಲು ಹೋದ ಪೋಲಿಸ್ ಪೇದೆಗಳಾದ ನಾಗರಾಜ್ ಮತ್ತು ವಿಶ್ವ ಎಂಬುವರ ಮೇಲೆಯೂ ಹಲ್ಲೆ ನಡೆದಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಭೇಟಿ ನೀಡಿದ್ದು ಪ್ರಕರಣ ಸಂಬಂಧ ಸುಮಾರು15 ರಿಂದ 20 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಟೇಶ್ ಕಾಲೋನಿ ಆದಿಕರ್ನಾಟಕದವರ ಗಣಪತಿ, ಬೋವಿ ಜನಾಂಗದವರ ಸರ್ಕಲ್‌ ಗಣಪತಿ ಕೂರಿಸಿದ್ದರು. ನಿನ್ನೆ ಗಣಪತಿ ವಿಸರ್ಜನೆ ಮಾಡಲು ಡೊಳ್ಳು ಹೊಡೆಯುವವರಿಗೆ ಮುಂಗಡ ಹಣ ಕೊಟ್ಟು ಬುಕ್ ಮಾಡಲಾಗಿತ್ತು. ಎರಡೂ ಸಮಿತಿಯವರು ಡೊಳ್ಳು ಹೊಡೆಯುವ ಒಂದೇ ತಂಡ ಬುಕ್ ಮಾಡಿದ್ದರು. ಇದರಿಂದ ಒಂದೇ ಕಡೆ ಡೊಳ್ಳು ಬಾರಿಸಿದ್ದ ಕಲಾವಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇನ್ನೊಂದು ಸಮಿತಿ. ಮುಂಗಡ ಹಣ ಕೊಟ್ಟಿದ್ದೇವೆ ಡೊಳ್ಳು ಬಾರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಇದರಿಂದ ಎರಡೂ ಕಡೆಯವರಿಗೆ ಮಾತಿಗೆ ಮಾತು ಬೆಳೆದು ನಂತರ ಕೈಕೈ ಮಿಲಾಯಿಸಿದ ಸದಸ್ಯರು. ಘಟನೆ ತೀವ್ರ ಸ್ವರೂಪಕ್ಕೆ ಹೋಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಪೊಲೀಸರು ಜಗಳ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಲು ಪೇದೆಗಳಾದ ನಾಗರಾಜ್, ವಿಶ್ವ ಮುಂದಾಗಿದ್ದಾರೆ. ರೊಚ್ಚಿಗೆದ್ದ ಗುಂಪು ಪೊಲೀಸರ ಮೇಲೆಯೂ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಘಟನೆ ಹಿನ್ನೆಲೆ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಎಲ್ಲ ಐದು ಗಣಪತಿಗಳನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರ ಮುಂದಾಳತ್ವದಲ್ಲಿ ನಿನ್ನೆಯೇ ವಿಸರ್ಜನೆ ಮಾಡಿಸಿದ ಆಡಳಿತ. ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

ಬೆಂಗಳೂರು: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಚಿಕಿತ್ಸೆ ಫಲಿಸದೆ ಅನುಷಾ ಎಂಬವರು ಕೊನೆಯುಸಿರೆಳೆದಿದ್ದಾರೆ. 2 ದಿನದ ಹಿಂದೆ ಅನುಷಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ಘಟನೆ ಬೆಂಗಳೂರಿನ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. 5 ವರ್ಷದ ಹಿಂದೆ ಶ್ರೀಹರಿ ಜೊತೆ ಅನುಷಾ ಮದುವೆ ಆಗಿತ್ತು. ಶ್ರೀಹರಿ, ಅನುಷಾ ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ. ಪತಿಯ ಅನೈತಿಕ ಸಂಬಂಧದ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗುತ್ತಿದ್ದು, ಇದರಿಂದ ಮನನೊಂದು ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಗಾಯಗೊಂಡಿದ್ದ ಅನುಷಾಳನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿ: Road Accident: ಹೊಸಮನೆ ಹೊಸ್ತಿಲು ತುಳಿದ ಎರಡೇ ದಿನದಲ್ಲಿ ನವವಧು ಆಕ್ಸಿಡೆಂಟ್‌ಗೆ ಬಲಿ