Thursday, 3rd October 2024

ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕರಕಲಾದ ಲಕ್ಷಾಂತರ ರೂ ಬೆಲೆ ಬಾಳುವ ವಸ್ತುಗಳು 

ಗುಬ್ಬಿ: ವಿದ್ಯುತ್ ತಂತಿ ಹರಿದು ಒಂದಕ್ಕೊಂದು ತಾಗಿ 30ಕ್ಕೂ ಹೆಚ್ಚು ಮನೆಗಳ ಟಿವಿ ಫ್ರಿಡ್ಜ್ ಎಲೆಕ್ಟ್ರಿಕಲ್ ವಸ್ತುಗಳು ಸೇರಿದಂತೆ ಬೆಲೆಬಾಳುವ ಆಭರಣ ಗೃಹ ಬಳಕೆ ವಸ್ತುಗಳು ಸುಟ್ಟುಹೋದ ಘಟನೆ ತಾಲೂಕಿನ ಕಡಬ ಹೋಬಳಿ ಬಾಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಫೋಟೋಗ್ರಾಫರ್ ಲೋಕೇಶ್ ಮಾತನಾಡಿ ಹಲವು ವರ್ಷಗಳಿಂದ ಸ್ಟುಡಿಯೋ ಇಟ್ಟುಕೊಂಡು ಜೀವನ ನಡೆಸು ತಿದ್ದೆ. ಮನೆಯಲ್ಲಿ ಇಟ್ಟಿದ್ದ ಸುಮಾರು 70 ಲಕ್ಷ ರೂಗಳ ಬೆಲೆ ಬಾಳುವ ಕ್ಯಾಮರಾ ಗಳು,ಎಲ್ಇಡಿ ಪ್ರಾಜೆಕ್ಟ್ಸ್ ಗಳು, ಗಣಕಯಂತ್ರಗಳು, ಹಾರ್ಡ್ ಡಿಸ್ಕ್ ಕಾಫಿಗಳು, ನಿತ್ಯ ಬಳಕೆಯ ವಸ್ತುಗಳು ಸುಟ್ಟು ಕರಕಲಾಗಿವೆ. ವಿದ್ಯುತ್ ಅವಘಡದಿಂದ ಜೀವನಕ್ಕೆ ಆಧಾರವಾಗಿದ್ದ ಎಲೆಕ್ಟ್ರಿಕಲ್ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಜೀವನೋಪಾಯಕ್ಕೆ ದಾರಿ ಇಲ್ಲದಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ಅಳಲು ತೋಡಿ ಕೊಂಡರು.
ಹಲವು ಬಾರಿ ವಿದ್ಯುತ್ ತಂತಿಗಳನ್ನು ಬೇರ್ಪಡಿಸುವಂತೆ ಮನವಿ ಮಾಡಿದರು. ಬೇರ್ಪಡಿಸದೇ ಬೆಸ್ಕಾಂ ಇಲಾಖೆಯ ಬೇಜಾಬ್ದಾರಿತನದಿಂದ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.