Wednesday, 11th December 2024

ಬಿಜೆಪಿ ವತಿಯಿಂದ ಸಿದ್ದರಾಮಯ್ಯಗೆ ಚಡ್ಡಿ ರವಾನೆ

ತುಮಕೂರು: ಆರ್.ಎಸ್.ಎಸ್. ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ, ಇಂದು ಜಿಲ್ಲಾ ಬಿಜೆಪಿ ಎಸ್.ಸಿ.ಮೋರ್ಚಾದವತಿಯಿಂದ ಗುರುವಾರ ಚಡ್ಡಿ ರವಾನಿಸುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರದ ಟೌನ್‌ಹಾಲ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಬಿಜೆಪಿ ಹಿರಿಯ, ಕಿರಿಯ ಮುಖಂಡರು ಹಾಗೂ ಎಸ್ಸಿ ಮೋರ್ಚಾದ ಪದಾಧಿಕಾರಿಗಳು,ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಪದಾಧಿಕಾರಿಗಳು ಮಾತನಾಡಿ, ಬಿಜೆಪಿಗೆ ಆರ್.ಎಸ್.ಎಸ್ ಮಾತೃ ಸಮಾನ. ನನ್ನಂತಹ ಲಕ್ಷಾಂತರ ಜನರನ್ನು ಬೆಳೆಸಿ, ಪಕ್ಷದಲ್ಲಿ ಹಲವು ಹುದ್ದೆಗಳನ್ನು ನೀಡಿದೆ.ಇದರ ಅರಿವಿಲ್ಲದ ಸಿದ್ದರಾಮಯ್ಯ ಆರ್.ಎಸ್.ಎಸ್.ನಲ್ಲಿ ದಲಿತರನ್ನು ಕೀಳಾಗಿ ಕಾಣಲಾಗುತ್ತಿದೆ.ನಿಮ್ಮ ಯೋಗ್ಯತೆ ಇಷ್ಟೇ ಎಂದು ಚಡ್ಡಿ ರವಾನೆ ಆಂದೋಲನದ ನೇತೃತ್ವ ವಹಿಸಿರುವ ಚಲವಾದಿ ನಾರಾಯಣ ಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದರು.
ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ್ ಮಾತನಾಡಿ, ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿಯ ಆಡಳಿತದಲ್ಲಿ ಫಲಾನುಭವಿ ಗಳಾಗಿರುವ ಲಕ್ಷಾಂತರ ಜನರು ನಮ್ಮ ಸಮಾವೇಶಗಳಲ್ಲಿ ಸೇರುತ್ತಿರುವುದನ್ನು ನೋಡಿ ಸಿದ್ದರಾಮಯ್ಯ ಅವರಿಗೆ ಸಹಿಸಲಾಗದೆ ಈ ರೀತಿಯ ಅಸಂಬದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
 ಪ್ರಧಾನ ಕಾರ್ಯದರ್ಶಿ ಹೆಚ್.ಡಿ.ಭೈರಪ್ಪ ಮಾತನಾಡಿ,  ಕಾಂಗ್ರೆಸ್ ಪಕ್ಷದ ಸ್ಥಿತಿ ಎನು ಎಂಬುದನ್ನು ನೀವು ಅರ್ಥಮಾಡಿಕೊಳ್ಳಿ, ಕಳೆದ 10 ವರ್ಷದ ಹಿಂದೆ ಹುಟ್ಟಿದ ಪಕ್ಷವೂ 2 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ.138 ವರ್ಷದ ಪಕ್ಷವಾಗಿರುವ ಕಾಂಗ್ರೆಸ್ ಸಹ 2 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ನಿಮ್ಮ ಹೇಳಿಕೆಗಳು ಹೀಗೆಯೇ ಮುಂದುವರೆದರೆ ಗಾಂಧಿ ಕಂಡ ಕಾಂಗ್ರೆಸ್ ಮುಕ್ತ ಭಾರತಕ್ಕೆ ನೀವೆ ನಾಂಧಿ ಹಾಡಿದಂತಾಗುತ್ತದೆ ಎಂದರು.
ಬಿಜೆಪಿ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ,  ಬಿಜೆಪಿಯ ಜನಪರತೆಯನ್ನು ನೋಡಿ,ಸಿದ್ದರಾಮಯ್ಯ ಅವರ ಮಾತಿನ ದಾಟಿ ಮತ್ತು ಕಾರ್ಯವೈಖರಿ ಬದಲಾಗಿದೆ.ನೀವು ಅಧಿಕಾರಕ್ಕಾಗಿ ಏನು ಮಾಡಲು ಹೇಸುವವರಲ್ಲ. ರಾಜಕೀಯ ಜೀವನ ನೀಡಿದ ಜೆಡಿಎಸ್‌ಗೆ ದ್ರೋಹ ಬಗೆದು, ಕಾಂಗ್ರೆಸ್ ನಲ್ಲಿ ಸಿ.ಎಂ.ಆಗಿ, ಈಗ ಅಲ್ಲಿಯೂ ಡಿಕೇಶಿ, ಡಾ.ಜಿ.ಪರಮೇಶ್ವರ್ ಅಂತಹವರಿಗೆ ದ್ರೋಹ ಬಗೆಯಲು ಹೊರಟಿದ್ದೀರಿ, ಅಧಿಕಾರಕ್ಕಾಗಿ ಎಂತಹ ಕೆಳಮಟ್ಟಕ್ಕೂ ಇಳಿಯಲು ಸಿದ್ದ ಎಂಬುದನ್ನು ನಿಮ್ಮ ರಾಜಕೀಯ ನಡೆಗಳೇ ಹೇಳುತ್ತವೆ.ವಿಧಾನಸಭೆಯಲ್ಲಿ ಮಾತನಾಡುವಾಗ ನಿಮ್ಮ ಪಂಜೆ ಉದುರಿದಾಗ, ನಿಮ್ಮ ಮಾನ ಕಾಪಾಡಿದ್ದು ಇದೇ ಚಡ್ಡಿ, ಅಂತಹ ಚಡ್ಡಿಯ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಬಿ.ನ0ದೀಶ್, ಪಿ.ಲೋಕೇಶ್, ನರಸಿಂಹಮೂರ್ತಿ,ವೈ.ಹೆಚ್.ಹುಚ್ಚಯ್ಯ, ರಮೇಶ್, ಹೆಚ್.ಎನ್.ಚಂದ್ರಶೇಖರ್,ಕೆ.ಪಿ.ಮಹೇಶ್,ವರದಯ್ಯ, ಹನುಮಂತರಾಜು,ಆಟೋ ಯಡಿಯೂರಪ್ಪ,ಶಬ್ಬೀರ್ ಅಹಮದ್, ಗಣೇಶ್.ಜಿ. ಪ್ರಸಾದ್, ಎಂ.ಗೋಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.