ತುಮಕೂರು: ಟಾಟಾ ಗ್ರೂಪಿನ ಅಧ್ಯಕ್ಷರಾದ ರತನ್ ಟಾಟಾ ಅವರ ನಿಧನಕ್ಕೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸಂತಾಪ ಸೂಚಿಸಿದ್ದಾರೆ.
ರತನ್ ಟಾಟಾರವರು ಸರಳ, ಸಜ್ಜನರು, ರಾಷ್ಟ್ರಪ್ರೇಮಿಗಳು ಮತ್ತು ದಾರ್ಶನಿಕ ನಾಯಕರಾಗಿದ್ದರು ಹಾಗೂ ಅಭಿವೃದ್ಧಿಯ ಹರಿಕಾರರಾಗಿದ್ದರು. ಟಾಟಾ ಗ್ರೂಪ್ 100ಕ್ಕೂ ಹೆಚ್ಚು ದೇಶಗಳಲ್ಲಿ 150ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು ಸೇವೆಗಳು ಮತ್ತು ಕಾರ್ಯಾಚರಣೆಗಳೊಂದಿಗೆ ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಯಾಗಿದೆ ಮತ್ತು ಇದು ನಮ್ಮ ರಾಷ್ಟ್ರದ ಹೆಮ್ಮೆಯಾಗಿದೆ. ರತನ್ ಟಾಟಾ ಅವರು ಟಾಟಾ ಸಮೂಹವು ಜಾಗತಿಕ ಪ್ರಾಮುಖ್ಯತೆ ಪಡೆಯು ವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರತನ್ ಟಾಟಾ ಅವರ ನಿಷ್ಕಲ್ಮಶ ದತ್ತಿ ಮತ್ತು ಲೋಕೋಪಕಾರಕ್ಕೆ ಅಚಲವಾದ ಬದ್ಧತೆ ಅತ್ಯಂತ ಶ್ಲಾಘನೀಯ ಮತ್ತು ಆದರ್ಶಪ್ರಯವಾದದ್ದು. ಹಾಗೂ ಅವರು ಪರೋಪಕಾರವೇ ಜೀವನದ ಪರಮ ಉದ್ದೇಶವೆಂದು ಸಾರಿದ ಹೃದಯವಂತರು.ಅನೇಕ ತಲೆಮಾರುಗಳ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಅವರು ಸ್ಫೂರ್ತಿ ಯಾಗಿದ್ದಾರೆ.
ದೂರದೃಷ್ಟಿಯ ನಾಯಕ ಮತ್ತು ಪರಿಣಿತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ನಾವು ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ. ರತನ್ ಟಾಟಾ ಅವರ ನಿಧನದಿಂದ ದುಃಖತಪ್ತ ಕುಟುಂಬಕ್ಕೆ ಮತ್ತು ದೇಶಕ್ಕೆ ಆಗಿರುವ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ.
ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಪರಮಾತ್ಮನು ಕರುಣಿಸಲಿ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Tumkur news: ಸಾಹಿತಿಗಳು, ರಂಗಭೂಮಿ ಕಲಾವಿದರು, ಚಲನಚಿತ್ರ ಮತ್ತು ಕಿರುತೆರೆ ಕಲಾವಿದರ ಕಡೆಗಣನೆಗೆ ಆಕ್ಷೇಪ: ದಯಾನಂದ ಸಾಗರ್