Thursday, 7th December 2023

ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ‌ ಕಾಂಗ್ರೆಸ್ ಅಭ್ಯರ್ಥಿ 

ತುಮಕೂರು: ವಿಧಾನಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ದಂಪತಿಗಳು ಸಿದ್ದಗಂಗಾ ಮಠದ  ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ನಂತರ ಮಾತನಾಡಿ, ತುಮಕೂರು,ಚಿತ್ರದುರ್ಗ,ದಾವಣಗೆರೆ,ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸುಮಾರು 45 ವಿಧಾನಸಭಾ ಕ್ಷೇತ್ರಗಳಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರ ಹರಡಿದೆ.ಇಂದಿನಿಂದ ತುಮಕೂರು ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದು,ಇದರ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅಶೀರ್ವಾದ ಪಡೆದಿದ್ದೇವೆ.
ಆಗ್ನೇಯ ಪದವಿಧರರ ಚುನಾವಣೆಯ ವೇಳೆ ನನಗೆ ಎರಡನೇ ಸ್ಥಾನ ಪಡೆಯಲು ಮತದಾರರ ಕಾರಣ.ಕ್ಷೇತ್ರದ ದೊಡ್ಡದಾಗಿತ್ತು. ಆದರೆ ಶಿಕ್ಷಕರ ಕ್ಷೇತ್ರ ದಲ್ಲಿ ಶಿಕ್ಷಕರು ಮಾತ್ರ ಮತದಾರರಾಗಿರುವ ಹಿನ್ನೆಲೆಯಲ್ಲಿ ಮತದಾರರ ಸಂಖ್ಯೆ ಕಡಿಮೆ ಇದೆ.ಅಲ್ಲದೆ ಕಳೆದ ಚುನಾವಣೆಯಲ್ಲಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ನನ್ನ ಮೇಲೆ ವಿಶೇಷ ಒಲವು ಇದೆ.ಈ ಹಿನ್ನೆಲೆಯಲ್ಲಿಯೇ ಐದು ಜಿಲ್ಲೆಗಳ ಪ್ರವಾಸವನ್ನು ಆರಂಭಿಸಿರುವುದಾಗಿ ತಿಳಿಸಿದರು.
ಮಾಜಿ ಶಾಸಕಿ  ಪೂರ್ಣಿಮಾ  ಮಾತನಾಡಿ, ನಮ್ಮ ತಂದೆಯ ಕಾಲದಿಂದಲೂ ನಮ್ಮ ಕುಟುಂಬ ಶಿಕ್ಷಣದ ಜೊತೆ ಜೊತೆಗೆ ರಾಜಕಾರಣವನ್ನು ಮಾಡಿ ಕೊಂಡು ಬರುತ್ತಿದೆ.ಹಿರಿಯೂರು ಕ್ಷೇತ್ರದಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರವನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ದಿ ಪಡಿಸಿದ್ದೇನೆ. ಆದರೆ ಮತದಾರರ ತೀರ್ಪನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.ಕಳೆದ ಬಾರಿಯ ಆಗ್ನೇಯ ಪದವಿಧರ ಕ್ಷೇತ್ರದಲ್ಲಿ ಅಲ್ಪ ಅಂತರದಲ್ಲಿ ಸೋತಿರುವ ಶ್ರೀನಿವಾಸ್ ಅವರ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಒಲವಿದೆ.ಈ ಬಾರಿ ನಮಗೆ ಗೆಲುವು ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಿದ್ದಗಂಗಾ ಮಠದ ಭೇಟಿ ನಂತರ,ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಮನೆಗೆ  ಪೂರ್ಣಿಮಾ ಶ್ರೀನಿವಾಸ್ ದಂಪತಿಗಳು ಭೇಟಿ ನೀಡಿ ಅವರನ್ನು ಅಭಿನಂದಿಸಿ,ಸಹಕಾರ ಕೋರಿದರು.ಈ ವೇಳೆ ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಪಾಪಣ್ಣ,ಪ್ರವರ್ಗ 1ರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶಪ್ಪ,ಮುಖಂಡರಾದ ಡಿ.ಎಂ.ಸತೀಶ್,ಸುರೇಶ್,ಕುಣಿಹಳ್ಳಿ ಮಂಜುನಾಥ್,ಅರುಣ್ ಕೃಷ್ಣಯ್ಯ,ಷಣ್ಮುಖಪ್ಪ,ಶ್ರೀನಿವಾಸ್,ಹುಚ್ಚಾಚಾರ್,ಲೋಕೇಶ್, ಗಂಗಾಧರ್, ಕೃಷ್ಣಕುಮಾರ್,ಬಾಬು ಇದ್ದರು.

Leave a Reply

Your email address will not be published. Required fields are marked *

error: Content is protected !!