Friday, 13th December 2024

Dr G Parameshwar: ಸಿದ್ದರಾಮಯ್ಯ  ಮುಖ್ಯಮಂತ್ರಿಗಳಾಗಿದ್ದು ಅವರೇ ಮುಂದುವರೆಯಲಿದ್ದಾರೆ 

DrGParameshwar, tumkur
ತುಮಕೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದು ಅವರೇ ಮುಂದುವರೆಯಲಿದ್ದಾರೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಾನು ಸಿಎಂ ಆಗುತ್ತೇನೆ ಎಂಬ ದೇಶಪಾಂಡೆ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ವಿಚಾರವನ್ನು ಯಾವುದನ್ನು ಕೂಡ ಉತ್ತರ ಕೊಡುವುದಕ್ಕೆ ಇಷ್ಟಪಡೋದಿಲ್ಲ. ಈಗ ಅವರು ಮುಖ್ಯಮಂತ್ರಿಗಳಿದ್ದಾರೆ ಮುಂದೆಯೂ ಇರುತ್ತಾರೆ ಎಂದರು. ಕಾಂಗ್ರೆಸ್‌ನಲ್ಲಿ ಸಿಎಂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಆಗಲಿ ನಿಮಗೇನು ತೊಂದರೆ ಆಗುತ್ತಿದಯಾ. ಮುಖ್ಯಮಂತ್ರಿ ಯಾರಾಗಬೇಕು ಎಂಬ ತೀರ್ಮಾನ ಮಾಡುವುದು ಹೈ ಕಮಾಂಡ್‌ನವರು ಎಂದರು.
ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಸರ್ಜಿಕಲ್ ಚೇರ್ ನೀಡಿರುವ ವಿಚಾರಕ್ಕೆ ಪ್ರತಿಕ್ರಯಿಸಿ ಅದು ನಮ್ಮ ಕಾರಾಗೃಹ ಇಲಾಖೆಗೆ ಬಿಟ್ಟಿರುವ ವಿಚಾರ. ನಾವಾಗಲಿ, ಸರ್ಕಾರ ಆಗಲಿ ಮಧ್ಯಸ್ಥಿಕೆ ವಹಿಸಲ್ಲ. ಕಾರಾಗೃಹ ಇಲಾಖೆಗೆ ಮಾರ್ಗಸೂಚಿಯಿದೆ ಅದರ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಅವರಿಗೆ ಯಾವ ರೀತಿ ಮ್ಯಾನ್ಯೂಯಲ್ ಇರುತ್ತದೆಯೋ ಹಾಗೆ ಮಾಡುತ್ತಾರೆ. ಕೋರ್ಟ್ನಲ್ಲಿ ಅರ್ಜಿ ಹಾಕಿಕೊಳ್ಳಬೇಕಾಗುತ್ತೆ, ನಮಗೆ ಇಂತಿAಥ ಸೌಲಭ್ಯ ಬೇಕು ಎಂದು ಆರೋಗ್ಯದ ದೃಷ್ಟಿಯಿಂದ ಸೌಲಭ್ಯ ಬೇಕು ಎಂದು ಅರ್ಜಿ ಹಾಕುತ್ತಾರೆ ಆಗ ಕೋರ್ಟ್ ಏನು ನಿರ್ದೇಶನ ಕೊಡುತ್ತೆ ಹಾಗೆ ಮಾಡಬೇಕಾಗುತ್ತದೆ. ಕಾರಾಗೃಹ ಅಧಿಕಾರಿಗಳು ತೆಗೆದುಕೊಳ್ಳುವ ಕೆಲ ನಿರ್ಧಾರಗಳಿರುತ್ತದೆ ಅದನ್ನು ಮೀರಿ ಕೆಲ ಸೌಲಭ್ಯಗಳು ಬೇಕು ಅಂದರೆ ಕೋರ್ಟ್ಗೆ ಹೋಗಬೇಕು ಎಂದರು.
ಸತೀಶ್ ಜಾರಕಿಹೊಳಿ ಜತೆ ಭೇಟಿ ವಿಚಾರಕ್ಕೆ ಪ್ರತಿಕ್ರಯಿಸಿ ನಾವು ಊಟಕ್ಕೂ ಸೇರಬಾರದ. ನಾನು ಅವತ್ತೇ ಸ್ಪಷ್ಟೀಕರಣ ಕೊಟ್ಟಿದ್ದೀನಿ. ನಾನು ವಿಧಾನಸೌಧದ ನನ್ನ ಕಚೇರಿಯಲ್ಲಿದ್ದೆ ಅವರು ನನಗೆ ಕಾಲ್ ಮಾಡಿದರು. ಟ್ರಾನ್ಸ್ಫರ್‌ಗೆ ಸಂಬAಧಿಸಿದ ವಿಚಾರದ ಬಗ್ಗೆ ಮಾತನಾಡಬೇಕು ಅಂದರು. ನಾನು ಊಟಕ್ಕೆ ಹೋಗುತ್ತಿದ್ದೇನೆ ಮಧ್ಯಾಹ್ನ ಸಿಗುತ್ತೇನೆ ಎಂದು ಹೇಳಿದಕ್ಕೆ ನಮ್ಮನೆಗೆ ಬನ್ನಿ ಎಂದರು ಇಬ್ಬರೂ ರಾಜಕಾರಣಿಗಳು ಸೇರಿದಾಗ ಏನ್ ಮಾತಾಡ್ತಾರೆ ರಾಜಕಾರಣನೇ ಮಾತನಾಡುತ್ತಾರೆ ಎಂದರು.