Saturday, 14th December 2024

ಸಿದ್ದಾರ್ಥ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯರ‍್ಥಿಗಳಿಗಾಗಿ ರಾಷ್ಟ್ರೀಯ ಸಮ್ಮೇಳನ

ತುಮಕೂರು: ಸಂಶೋಧನೆಯ ಕಡೆಗೆ ವಿದ್ಯರ‍್ಥಿಗಳು ಹೆಚ್ಚು ಗಮನ ಹರಿಸುತ್ತಿಲ್ಲ. ತರಗತಿಯ ಅಭ್ಯಾಸದ ಜೊತೆಗೆ ಸಂಶೋಧನೆಯಲ್ಲಿ ಹೆಚ್ಚಿನ ಗಮನ ವಹಿಸುವುದು ಅಗತ್ಯ. ಸಮಾಜಕ್ಕೆ ವೈದ್ಯರ ಅವಶ್ಯಕತೆ ಹೆಚ್ಚಾಗುತ್ತಿದ್ದು, ತಮ್ಮ ಕರ‍್ಯ ಶ್ರೇಷ್ಠತೆಯಿಂದ ಸಾರ‍್ಥ್ಯವನ್ನು ಉತ್ತಮಗೊಳಿಸಿ ಕೊಳ್ಳು ವೈದ್ಯ ಸಮುದಾಯ ಮುಂದಾಗಬೇಕಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.

ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ‘ಕ್ರಿಯಾಶೀಲತೆ ಮತ್ತು ಆರೋಗ್ಯ ಶುಶ್ರೂಷೆಯಲ್ಲಿ ಕ್ರಿಯಾಶೀಲತೆಯ ಅಳವಡಿಕೆ’ ವಿಷಯ ಕುರಿತು ರಾಷ್ಟ್ರೀಯ ಸಮ್ಮೇಳನದಲ್ಲಿ ‘ಸೌವೆನೀಯರ್’ ನಿಯತಕಾಲಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಹೊಸ ಆರೋಗ್ಯ ಸಮಸ್ಯೆಗಳು ವೇಗವಾಗಿ ಬೆಳೆಯುತ್ತಿರುವ ಸಂರ‍್ಭದಲ್ಲಿ ತಂತ್ರಜ್ಞಾನ ಜಾಗತೀಕರಣ, ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಆರೋಗ್ಯ ಕ್ಷೇತ್ರದ ಮುಂದಿಟ್ಟಿದೆ. ಆರೋಗ್ಯ ಕ್ಷೇತ್ರ ಈ ಎಲ್ಲಾ ಸವಾಲುಗಳನ್ನು ಎದುರಿಸಲು ಸಿದ್ಧ ವಾಗಿರಬೇಕು. ಆರೋಗ್ಯ ಸಮಸ್ಯೆಗಳಿಗೆ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಪಠ್ಯ ಭಾಗದಲ್ಲಿ ಸ್ವಲ್ಪ ಬದಲಾವಣೆ ಅಗತ್ಯವಿದೆ ಎಂದು ನುಡಿದರು.

ವೈದ್ಯರಾದ ಜೆ ಎ ಜಯಲಾಲ್ ಮಾತನಾಡಿ,ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವರಿಗೆ ಪುರ‍್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ರ‍್ತವ್ಯ. ಈ ನಿಟ್ಟಿನಲ್ಲಿ ವೈದ್ಯರು ಧನಾತ್ಮಕ ಗುಣದಿಂದ ರೋಗಿಗಳನ್ನು ಪರೀಶಿಲಿಸಬೇಕು ಎಂದರು.

ಕುಟುಂಬ ದತ್ತು ಕರ‍್ಯಕ್ರಮ ವಿಷಯದ ಕುರಿತು ಬಿಬಿ ನಗರದ ಏಮ್ಸ್ ನರ‍್ದೇಶಕರಾದ ಡಾ|| ವಿಕಾಸ್ ಭಾಟಿಯಾಮತ್ತು ಸಾಕ್ಷಿ ಆಧಾರಿತ ಔಷಧಿ ಎಂಬ ವಿಷಯದ ಕುರಿತು ಡಾ|| ಸಂಜೀವ್ ಲೇವಿನ್ ವಿಶೇಷ ಉಪನ್ಯಾಸ ನೀಡಿದರು.

ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ. ಝಡ್ ಕುರಿಯನ್, ಪ್ರಾಂಶುಪಾಲ ಡಾ|| ಸುಶೀಲ್ ಮಹಾಪಾತ್ರ, ಉಪಪ್ರಾಂಶುಪಾಲ ಡಾ.ಪ್ರಭಾಕರ್ ಜಿ ಎನ್, ಡಾ|| ಮಂಜುನಾಥ್ ಜಿ ಎನ್, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ|| ಪ್ರವೀಣ್ ಕುಡವ, ವಿಚಾರ ಸಂಕಿರಣದ ಸಂಘಟನಾ ಕರ‍್ಯರ‍್ಶಿ ಡಾ|| ಸವಿತಾ ರಾಣಿ ಬಿ ಬಿ,ಸಾಹೇ ಕುಲಾಧಿಪತಿಯ ಸಲಹೆಗಾರರಾದ ವಿವೇಕ್ ವೀರಯ್ಯ ಹಾಗೂ ದೇಶದ ಎಲ್ಲಾ ಭಾಗಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ವೈದ್ಯಕೀಯ ವಿದ್ಯರ‍್ಥಿಗಳು ಹಾಗೂ ವೈದ್ಯರು ೨೦೦ಕ್ಕೂ ಹೆಚ್ಚು ವಿಷಯಗಳ ಕುರಿತು ವೈದ್ಯಕೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.