ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರೂರ ಬಳಿ ನಡೆದ ಗುಡ್ಡ ಕುಸಿತ ವಾದ ಸಂದರ್ಭದಲ್ಲಿ ಹೊಟೆಲ್ ನ ಒಂದೇ ಕುಟುಂಬದ ಐವರು ಮೃತಪಟ್ಟಿದ್ದರು.
ಅದರಲ್ಲಿ ಇಂದು ಬೆಳಗಿನ ಹೊತ್ತಲ್ಲಿ ಗೋಕರ್ಣದ ಸೇತುವೆಯ ಬಳಿ ಬಾಲಕಿ ಆವಂತಿಕಾ ಮೃತದೇಹಪತ್ತೆಯಾಗಿದೆ. ಮೃತ ದೇಹವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸುರಿಯುತ್ತಿರುವ ಮಳೆಯಿಂದಾಗಿ ಅನಮೋಡ್ ಗೋವಾ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕರ್ನಾಟಕ ಗಡಿಯಿಂದ ಸುಮಾರು 12ಕಿ.ಮಿ ದೂರದ ಗೋವಾ ವ್ಯಾಪ್ತಿಯಲ್ಲಿ ದೂದಸಾಗರ್ ಸ್ವಾಮಿ ದೇವಸ್ಥಾನದ ಹತ್ತಿರ ಭೂಕುಸಿತ ಉಂಟಾಗಿ ಹೆದ್ದಾರಿ ಸಂಚಾರ ಸ್ಥಗಿತವಾಗಿದೆ.