Saturday, 14th December 2024

ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸುವ್ಯವಸ್ಥೆ ಸಭೆ

ಶಿರಸಿ: ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸುವ್ಯವಸ್ಥೆ ಕುರಿತಂತೆ ಸಭೆ ನಡೆಸಿದರು.

ನೀರು, ರಕ್ಷಣೆ, ಸುಭದ್ರತೆ, ಪ್ರಚಾರ, ಸೇರಿದಂತೆ ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುವ ಕಾರಣ ಯಾರೂ ಕೂಡಾ ಎಚ್ಚರ ತಪ್ಪಿ ಕಾರ್ಯ ಮಾಡುವಂತಿಲ್ಲ. ಯಾವುದೇ ವ್ಯವಸ್ಥೆಯಲ್ಲಿ ಅವ್ಯವಸ್ಥೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಮೋದಿಯವರಲ್ಲೂ ಇಲ್ಲಿಯ ಜನತೆಗೆ ತೋರಿಸುವ ಕಾಳಜಿ ನಮ್ಮದು. ನಾವೂ ಕೂಡಾ ನಾಳೆ ಮೋದಿ ಜತೆಗೆ ಇರುವುದಿಲ್ಲ. ವೇದಿಕೆಯ ಮೇಲೆ ಕೆಲವರಿಗೆ ಮಾತ್ರ ಅವಕಾಶ ಇರಲಿದೆ.

ಶಿರಸಿಗೆ 28 ರಂದು ಮೋದಿ ಬರಲಿದ್ದು, ಆಗನಕ್ಕೆಭರದ ಸಿದ್ದತೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಕ್ಕಿಂತ ಹೆಚ್ಚು ಜನರ ಆಗಮನವಾಗಲಿದೆ. ಬೈಕ್ ರ್ಯಾಲಿ ಮುಂತಾದವುಗಳಿಂದ ಇಲ್ಲಿಗೆ ಜನ ಬರಲಿದ್ದಾರೆ. ಹತ್ತು ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಡೆಯಲಿದೆ ಎಂದು ಕಾಗೇರಿ ಹೇಳಿದರು.

ಈ ಸಂದರ್ಭದಲ್ಲಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಬಿಜೆಪಿ ವಕ್ತಾರ ಸದಾನಂದ, ಚುನಾವಣಾ ಉಸ್ತುವಾರಿ ಗಿರೀಶ್ ಪಟೇಲ್ ಉಪಸ್ಥಿತರಿದ್ದರು.