ತುಮಕೂರು: ಇಂದಿನ ಜಗತ್ತಿನಲ್ಲಿ ಮಾಹಿತಿ ಮಹಾಪೂರವೇ ಇ-ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಅನಗತ್ಯ ಕಲಿಕಾ ಮಾಹಿತಿ ಯನ್ನು ತ್ಯಜಿಸಿ ಅಗತ್ಯ ಕಲಿಕೆಯ ಮಾಹಿತಿ ಮರುಪೂರಣ ಮಾಡಿ ಕೊಳ್ಳಬೇಕು ಎಂದು ಬೆಂಗಳೂರಿನ ವಿಷನ್ ಇಂಡಿಯಾ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ಮತ್ತು ಮ್ಯಾನೇಜ್‌ಮೆಂಟ್ ತಜ್ಞ ಕಿಶೋರ್ ಜಾಗೀರ್‌ದಾರ್ ನುಡಿದರು.
ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಬಿ.ಇ.ತರಗತಿಗಳ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಪರಿವರ್ತನೆ ಜಗದ ನಿಯಮವಾಗಿದ್ದು, ವಿದ್ಯಾರ್ಥಿಗಳು ತಮಗೆ ದೊರಕುವ ಅನುಭವದ ಮೂಸೆಯಲ್ಲಿ ನಿರಂತರ ವಾಗಿ ಕೌಶಲ್ಯದ ನಿಕಷಕ್ಕೆ ತಮ್ಮನ್ನು ಒಡ್ಡಿಕೊಂಡು ಕಾಪೋರೇಟ್ ಜಗತ್ತಿನಲ್ಲಿ ಬಲವಾದ ಹೆಜ್ಜೆಯೂರಲು ಉತ್ತಮ ಪ್ರಯತ್ನವನ್ನು ವ್ಯಾಸಂಗದಲ್ಲಿ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶ್ರೀದೇವಿ ಛಾರಿಟಬಲ್ ಟ್ರಸ್ಟಿನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡುತ್ತಾ, ಪ್ರಸ್ತುತದಲ್ಲಿ ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ತರಹದ ಯೋಜನೆಗಳಿಂದ ಜನಗಳ ನಿತ್ಯ ಜೀವನದ ಚಹರೆಯೇ ಬದಲಾಗಿದ್ದು, ಜನಗಳು ತಮ್ಮಲ್ಲಿ ನಾಣ್ಯಗಳ ಚಲಾವಣೆ ಮತ್ತು ಹಣ ವಿನಿಮಯದಲ್ಲಿ ಕ್ರಾಂತಿಕಾರಕ ಬದಲಾವಣೆ ಕಂಡುಕೊಳ್ಳುವುದರ ಮೂಲಕ ಹಿಂದಿನ ವರ್ಷಗಳಲ್ಲಿ ಭಾರತದಂತಹ ದೇಶದಲ್ಲಿ ಅಸಾಧ್ಯವೆನಿಸಿದ್ದಂತಹ ಬದಲಾವಣೆ ಗಳು ಸುಲಭ ಸಾಧ್ಯವಾಗಿವೆ ಮತ್ತು ಇದೆಲ್ಲವೂ ಮಾಹಿತಿ ತಂತ್ರಜ್ಞಾನ, ಕಂಪ್ಯೂಟರೀಕರಣ ಮತ್ತು ಕೃತಕ ಬುದ್ಧಿ ಮತ್ತೆಯ ಫಲವೆಂದೂ ನುಡಿದರು.
ಪ್ರಾಂಶುಪಾಲ ಡಾ.ನರೇಂದ್ರವಿಶ್ವನಾಥ್ ಮಾತನಾಡಿ, ಅವಿರತ ಶ್ರದ್ಧೆ ಮತ್ತು ಉತ್ತಮ ಫಲಿತಾಂಶ ಮತ್ತು ಸಮರ್ಪಕ ಉದ್ಯೋಗಗಳಿಕೆ ವಿದ್ಯಾರ್ಥಿಗಳ ಗುರಿಯಾಗಲೆಂದು ಶುಭ ಹಾರೈಸಿ ಸ್ವಾಗತಿಸಿದರು.
ಸಮಾರಂಭದಲ್ಲಿ ಆಡಳಿತಾಧಿಕಾರಿಟಿ.ವಿ.ಬ್ರಹ್ಮದೇವಯ್ ಯ, ವಿಭಾಗ ಮುಖ್ಯಸ್ಥರಾದ ಡಾ.ಸಿ.ನಾಗರಾಜ್,ಡಾ.ಎನ್.ಚಂದ್ರಶೇ ಖರ್, ಡಾ.ಕೆ.ಎಸ್. ರಾಮಕೃಷ್ಣ, ಡಾ.ಜಿ.ಮಹೇಶ್‌ಕುಮಾರ್, ಡಾ.ಬಸವೇಶ್, ಡಾ.ಸುಹಾಸ್, ಡಾ.ಚರಣ್, ಡಾ.ಕಿಶೋರ್‌ಕುಮಾರ್, ಪ್ರೊ.ಕೆ.ಪಿ.ಚಂದ್ರಯ್ಯ, ಡಾ.ಪಿ.ಜೆ. ಸದಾಶಿವಯ್ಯ, ಪ್ರೊ.ಐಜಾಜ್ ಅಹಮದ್ ಷರೀಫ್, ಪ್ರೊ.ಜಿ.ಹೆಚ್.ರವಿಕುಮಾರ್, ಪ್ರೊ.ಗಿರೀಶ್ ಹಾಗೂ ಇತರೆ ಉಪನ್ಯಾಸಕ ವರ್ಗದವರು ಹಾಜರಿದ್ದರು.