Wednesday, 11th December 2024

ವೇದಿಕೆಯಿಂದ ಕೆಳಗಿಳಿದ ಶ್ರೀದೇವಿ ನಾಯಕ ಕಾರಣ ಏನು ಗೊತ್ತಾ…?

ರಾಯಚೂರು: ನಗರದ ಗಾಂಧಿ ಕ್ರೀಡಾಂಗಣದಲ್ಲಿ ಐದು ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ವೇದಿಕೆಯ ಮೇಲಿದ್ದ ಕಾಂಗ್ರೆಸ್ ಜಿಲ್ಲಾ ಹಿರಿಯ ಮುಖಂಡೆ ಶ್ರೀದೇವಿ ನಾಯಕ ಅವರನ್ನು ಅಧಿಕಾರಿಗಳು ಕೆಳಗೆ ಇಳಿಸಿದ ಸಂದರ್ಭ ನಡೆಯಿತು.
ಕಾರ್ಯಕ್ರಮ ಉದ್ಘಾಟನೆ ಮುಂಚೆ ಆಗಮಿಸಿದ ಅವರು ವೇದಿಕೆ ಮುಂಭಾಗದಲ್ಲಿ ಮಲ್ಲಿಕಾರ್ಜುನ್ ಗೌಡ ಕೃಷಿ ಹೊನ್ನತ ಮಾರುಕಟ್ಟೆ ಸಮಿತಿಯ ಅಧ್ಯಕ್ಷರ ಆಸ್ಥಾನಗಳಲ್ಲಿ ಕುಳಿತಿರುವ ಹಿನ್ನೆಲೆಯಲ್ಲಿ ಅವರನ್ನು  ಎರಡು ತಾಸುಗಳ ನಿರಂತರ ಚರ್ಚೆಯ ಮೂಲಕ ಕೊನೆಗೂ ಅಧಿಕಾರಿಗಳು ಪೊಲೀಸ್ ಪಡೆಯ ಮೂಲಕ ಕೆಳಗಿಳಿಸಿದ ಘಟನೆ ನಡೆಯಿತು.