Friday, 13th December 2024

ಯಾರನ್ನು ಅವಲಂಬಿಸಿ ರಾಜಕಾರಣ ಮಾಡುವುದಿಲ್ಲ: ಎಸ್ಆರ್ ಶ್ರೀನಿವಾಸ್

ಗುಬ್ಬಿ: ನಾನು ಯಾರನ್ನು ಅವಲಂಬಿಸಿ ರಾಜಕಾರಣ ಮಾಡುವುದಿಲ್ಲ ಜನ ಅಭಿಪ್ರಾಯ ಹಾಗೂ ಕಾರ್ಯಕರ್ತರ ನಿರ್ಣಯವೇ ಅಂತಿಮ ತೀರ್ಮಾನ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ತಿಳಿಸಿದರು.

 ತಾಲೋಕಿನ ಕಡಬ ಹೋಬಳಿ ಗಂಗಸಂದ್ರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 75 ಲಕ್ಷ ರೂಗಳ ಮನೆಮನೆಗೂ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಕಡಬ ಗ್ರಾಮದಲ್ಲಿ 50 ಲಕ್ಷ ರೂಗಳ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ದವರು.
ಸಾರ್ವಜನಿಕರ ತೀರ್ಪು ಏನೆಂಬುದು 2023ಕ್ಕೆ ಗೊತ್ತಾಗುತ್ತದೆ ಜನರಿಗೆ ಕಾರ್ಯಕರ್ತರಿಗೆ ಮೋಸ ಮಾಡಿ ರಾಜಕಾರಣ ಮಾಡು ವವನು ನಾನಲ್ಲ. ಸಾರಾ ಮಹೇಶ್ ನಾನು ಒಳ್ಳೆಯ ಸ್ನೇಹಿತರು. ಹಾಗಾಗಿ ತುಮಕೂರಿನ ಕಡೆ ಬಂದರೆ ಮನೆಗೆ ಬಂದು ಹೋಗುತ್ತಾರೆ. ಅದನ್ನು ಹೊರತುಪಡಿಸಿ ರಾಜಕೀಯ ಚರ್ಚೆಯಾಗಲಿ ಪಕ್ಷದ ವಿಚಾರವಾಗಲಿ ಮಾತನಾಡಿಲ್ಲ ಎಂದು ತಿಳಿಸಿದರು.
ಜಿ ಟಿ ದೇವೇಗೌಡ ಹಾಗೂ ಶಿವರಾಮೇಗೌಡ ಜೆಡಿಎಸ್ ಗೆ ಮರಳಿರುವ ವಿಚಾರವಾಗಿ ನಾನು ಯಾರನ್ನು ಅವಲಂಬಿಸಿ ರಾಜಕಾರಣ ಮಾಡುವುದಿಲ್ಲ ಅವರವರ ಕ್ಷೇತ್ರದಲ್ಲಿ ಜನ ಅಭಿಪ್ರಾಯ ಏನಿದೆಯೋ ಆ ರೀತಿ ರಾಜಕರಣ ಮಾಡುತ್ತಾರೆ ಬೇರೆಯವರ ರಾಜಕಾ ರಣದ ಬಗ್ಗೆ ಮಾತನಾಡುವುದಿಲ್ಲ ಎಂದ ಅವರು ನಾನು ರಾಜೀನಾಮೆ ನೀಡಿದ ನಂತರ ಜನಾಭಿಪ್ರಾಯ ಹಾಗೂ ಕಾರ್ಯಕರ್ತರ ಸಲಹೆ ಮೇರೆಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ದೇವೇಗೌಡರು ಮನೆಗೆ ಭೇಟಿ ನೀಡುತ್ತಾರೆ ಎನ್ನಲಾದ ವಿಚಾರವಾಗಿ ದೇವೇಗೌಡರು ದೇಶದ ಪ್ರಧಾನಿ ಹುದ್ದೆಯನ್ನು ಏರಿದಂತ ವರು ಅವರ ಬಗ್ಗೆ ಅಪಾರವಾದಂತಹ ಗೌರವವಿದೆ ಮನೆಗೆ ಭೇಟಿ ನೀಡುವುದಾದರೆ ಖಂಡಿತವಾಗಿಯೂ ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ ಕೆ ಗೌಡ್ರು, ಗ್ರಾಮ ಪಂಚಾಯಿತಿ ಸದಸ್ಯೆ ಕವಿತಾ ಎಚ್  ಟಿ, ಮಹಾಲಿಂಗಯ್ಯ, ಶಂಕರಪ್ಪ, ಶಿವರುದ್ರಯ್ಯ, ಸ್ವಾಮಿ, ಕೃಷ್ಣಮೂರ್ತಿ, ಪ್ರಿನ್ಸಿಪಾಲ್ ಸೋಮಶೇಖರ್, ಉಪನ್ಯಾಸಕಿ  ಅನುಸೂಯ, ದರ್ಶನ್, ಉಮೇಶ್, ಬಾಲಕೃಷ್ಣೇಗೌಡ, ವೆಂಕಟರಂಗಯ್ಯ, ಕಡಬ ಶಂಕರ್ ಮುಂತಾದವರಿದ್ದರು.