Friday, 13th December 2024

ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದ ಶಾಸಕ: ಎಸ್ ಆರ್ ಶ್ರೀನಿವಾಸ್

ಗುಬ್ಬಿ: ನುಡಿದಂತೆ ನಡೆಯುವ ಸರ್ಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
 ಪಟ್ಟಣದ ಬೆಸ್ಕಾಂ ಕಛೇರಿ ಆವರಣದಲ್ಲಿ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ದೀನ ದಲಿತರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು. ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಬಹಳ ಯಶಸ್ವಿಯಾಗಿ ಸಾಗುತ್ತಿದೆ.
 ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರವಾಗಿದೆ. ಗೃಹಜ್ಯೋತಿ ಯೋಜನೆ ಅಡಿ ಉಚಿತ ಬೆಳಕು ಸುಸ್ಥಿರ ಬದುಕು ಎಂಬ ನಿಟ್ಟಿನಲ್ಲಿ ಗೃಹ ಜ್ಯೋತಿ ಯೋಜನೆಯಯನ್ನು ಜಾರಿಗೊಳಿಸಲಾಗಿದೆ.
 ತಾಲೂಕಿನಲ್ಲಿ 70556 ಕುಟುಂಬಗಳಿದ್ದು 49,900 ಗೃಹಜೋತಿಗೆ ನೊಂದಣಿಯಾಗಿದ್ದು 20. 666 ಇನ್ನು ಬಾಕಿ ಉಳಿದಿವೆ.ಸರ್ಕಾರ ಸಮಯವನ್ನು ವಿಸ್ತಾರ ಮಾಡಿದೆ. ನೊಂದಣಿ ಆಗದೆ ಇರುವವರು ಕೂಡಲೆ ನೊಂದಣಿ ಮಾಡಿಕೊಳ್ಳಬೇಕು ಎಂದರು.
 ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ ಆರತಿ, ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಎ ಇ ಇ ಕರಿಯಪ್ಪ, ಪ ಪಂ ಸದಸ್ಯರಾದ ಕೃಷ್ಣಮೂರ್ತಿ, ಶಶಿಕುಮಾರ್, ಶೌಕತ್ ಹಾಲಿ , ಕುಮಾರ್, ರಂಗಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯತೀಶ್, ವತ್ಸಲ, ಶಿವಣ್ಣ ಎಂ ಡಿ, ಇತರರು ಹಾಜರಿದ್ದರು.