Wednesday, 11th December 2024

ಎಸ್‌ಎಸ್‌ಐಟಿ ಕಾಲೇಜು ವಸತಿ ನಿಲಯದಲ್ಲಿ ಹೈಟೆಕ್ ತ್ರಂತ್ರಜ್ಞಾನದ ಲಾಂಡ್ರಿ ಘಟಕ

ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಲಾಂಡ್ರಿ (ಬಟ್ಟೆ ತೊಳೆಯುವ) ಘಟಕವನ್ನು ಆರಂಭಿಸಲಾಗಿದೆ.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಕನ್ನಿಕಾ ಪರಮೇಶ್ವರಿ ಅವರು ಅತ್ಯಾಧುನಿಕ ಡಿಜಿಟಲ್ ತಂತ್ರ ಜ್ಞಾನದ ಲಾಂಡ್ರಿ ಘಟಕದ ಉದ್ಘಾಟನೆ ನೆರವೇರಿಸಿ ದರು.
ಸ್ಮಾರ್ಟ್ ಡಿಜಿಟಲ್ ತಂತ್ರಜ್ಞಾನ ಬಳಕೆಯ ವ್ಯವಸ್ಥಿತ ಹೈಟೆಕ್ ಲಾಂಡ್ರಿ ಇದಾಗಿದ್ದು, ಪ್ರತೀ ವಾಷಿಂಗ್ ಮಿಷಿನ್ ೮ ಕೆ.ಜಿ. ಸಾಮರ್ಥ್ಯ ಹೊಂದಿದೆ. ಬೆಂಗಳೂರಿನ ಹೈಯರ್ ಕಂಪನಿಯ ಸಹಭಾಗಿತ್ವದಲ್ಲಿ ಲಾಂಡ್ರಿ ಘಟಕವನ್ನು ಅಳವಡಿಸಿದ್ದು, ವಸತಿ ನಿಲಯದ ವಿದ್ಯಾರ್ಥಿನಿಯರು ಮೊಬೈಲ್ ಆ್ಯಪ್ ಮುಖಾಂತರ ಲಾಂಡ್ರಿಯನ್ನು ಬಳಸಿಕೊಳ್ಳಬಹುದು ಎಂದು ಸಿದ್ಧಾರ್ಥ ಇಂಜಿನಿಯರಿ0ಗ್ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ರವಿಪ್ರಕಾಶ ತಿಳಿಸಿದರು.
ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝೆಡ್.ಕುರಿಯನ್, ಹೈಯರ್ ಕಂಪನಿಯ ಶಾಖಾ ವ್ಯವಸ್ಥಾಪಕ ಸುರೇಶ್ ಸಿ. ಎನ್, ಹಾಸ್ಟೆಲ್ ವಾರ್ಡನ್ ಪ್ರೊ. ಎಂ.ಸುಷ್ಮಾ ಮತ್ತು ಹಾಸ್ಟೆಲ್ ಉಪ ವಾರ್ಡನ್ ಡಾ.ಎಂ.ಸಿ. ಸುಪ್ರಿಯಾ ಸ್ಮಾರ್ಟ್ ಲಾಂಡ್ರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.