Wednesday, 11th December 2024

SSLC: ವಿದ್ಯಾನಿಧಿ ಎಸ್‌ಎಸ್‌ಎಲ್‌ಸಿ ಮಾರ್ಗದರ್ಶಿ ಬಿಡುಗಡೆ

ತುಮಕೂರು : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ಅನುಕೂಲವಾಗಲೆಂದು ವಿದ್ಯಾನಿಧಿ ರೂಪಿಸಿರುವ ಗಣಿತ ಮತ್ತು ವಿಜ್ಞಾನ ಮಾರ್ಗದರ್ಶಿ ವಿದ್ಯಾರ್ಥಿ ಮಿತ್ರ ಕೈಪಿಡಿಯನ್ನು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಬಿಡುಗಡೆಗೊಳಿಸಿದರು.

ವಿದ್ಯಾರ್ಥಿಮಿತ್ರವು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅಂಕ ಗಳಿಸಲು ಬಹಳ ನೆರವಾಗುತ್ತದೆ ಎಂಬು ದಕ್ಕೆ ಈ ಹಿಂದಿನ ಫಲಿತಾಂಶಗಳೇ ಸಾಕ್ಷಿ. ಸಂಸ್ಥೆ ನಡೆಸುವ ವಿ-ಮಾಸ್ಟರ್ ಮೈಂಡ್ ನಲ್ಲಿ ಮೊದಲಿಗರಾಗುವ ಮಕ್ಕಳೇ ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಯೂ ಜಿಲ್ಲೆಗೆ ಪ್ರಥಮಸ್ಥಾನ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಮಿತ್ರವನ್ನು ರೂಪಿಸಿದ ಶಿಕ್ಷಕ, ಎಚ್.ಜಿ.ಎಸ್ ಲರ್ನಿಂಗ್ ಸೆಂಟರ್‌ನ ಮುಖ್ಯಸ್ಥ ಎಚ್.ಜಿ. ಸಂಗಪ್ಪ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ಉಚಿತ ಕೈಪಿಡಿ ಲಭ್ಯ

ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಅಧ್ಯಾಯದಿಂದಲೂ ಸಂಭಾವ್ಯ ಪ್ರಶ್ನೆಗಳು ಮತ್ತು ಮಾದರಿ ಪ್ರಶ್ನೆಪತ್ರಿಕೆಗಳು ಈ ಪುಸ್ತಕದಲ್ಲಿವೆ.

ಪರಿಣಿತರಿಂದ ರೂಪಿಸಲ್ಪಟ್ಟಿರುವ ಈ ಪುಸ್ತಕವು ಹತ್ತನೆಯ ತರಗತಿ ವಿದ್ಯಾರ್ಥಿಗಿಗಳಿಗೆ ಉಚಿತವಾಗಿ ಲಭ್ಯವಿದ್ದು, ಆಸಕ್ತ ವಿದ್ಯಾರ್ಥಿಗಳು ವಿದ್ಯಾನಿಧಿ ಕಾಲೇಜಿಗೆ ಭೇಟಿಕೊಟ್ಟು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9380345722, 9844857419, 7022901242 ನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: SSLC: ಎಸ್‌ಎಸ್‌ಎಲ್‌ಸಿ ಫೇಲಾದ್ರೂ ಕ್ಲಾಸ್ ಅಟೆಂಡ್‌ ಮಾಡಿ: ರಾಜ್ಯ ಸರ್ಕಾರ ಆದೇಶ