ತುಮಕೂರು: ತಾಲೂಕಿನ ಕೋರಾ ಹೋಬಳಿ ನಂದಿಹಳ್ಳಿ ಗ್ರಾಮದ ಚಂದ್ರಶೆಖರಯ್ಯ ( ೩೯ ) ಎಂಬ ಯುವ ರೈತ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇತ್ತಿಚಿಗೆ ತನ್ನ ಎರಡು ಎಕರೆ ಜಮೀನಿನಲ್ಲಿ ಮೂರು ಲಕ್ಷ ರುಪಾಯಿ ಸಾಲ ಮಾಡಿ ಎರಡು ಕೊಳವೆ ಬಾವಿ ಕೊರೆಸಿದ್ದು ಎರಡು ವಿಫಲವಾಗಿದ್ದವು. ಇಬ್ಬರು ಮಕ್ಕಳ ವಿದ್ಯಾಭ್ಯಾಸ ಮತ್ತು ಸಂಸಾರ ಸಾಗಿಸಲು ಸಹ ಕೈಸಾಲ ಮಾಡಿದ್ದು ಸಾಲಬಾಧೆಯಿಂದ ಜಿಗುಪ್ಸೆಗೊಂಡು ತಮ್ಮ ಜಮೀನಿನ ಹುಣಸೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರು ಗಂಡು ಮಕ್ಕಳು ಪತ್ನಿ ರೇಣುಕಮ್ಮ ಹಾಗೂ ವೃದ್ಧ ತಾಯಿ ಅನಾಥರಾಗಿದ್ದಾರೆ