Saturday, 14th December 2024

ಶಾಸಕರಾದ ಭೀಮಣ್ಣ ನಾಯ್ಕ್ ರನ್ನು ಸೂಪರ್‌ ವೈಸರ್ ಎಂದು ಕರೆದ ಬಿಜೆಪಿಗರಿಗೆ ಧನ್ಯವಾದಗಳು

ಶಿರಸಿ: ದಶಕಗಳ ಕಾಲ ಶಿರಸಿ ಸಿದ್ದಾಪುರ ಕ್ಷೇತ್ರ ವಿಐಪಿ ಸಂಸ್ಕೃತಿಯ ಶಾಸಕರಿಂದ ಬೇಸತ್ತಿದ್ದೂ, ಈ ಬಾರಿ ಜನಗಳೇ ತಮ್ಮ ಸೂಪರ್‌ ವೈಸರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಜಾತಿ ಧರ್ಮಗಳ ಬೇಧವಿಲ್ಲದೆ, ಪಕ್ಷ ಪಾತ ಮಾಡದೇ ತಾವು ಶಾಸಕರು ಎಂಬ ಅಹಂಕಾರವಿಲ್ಲದೆ ಜನಗಳ ಕಷ್ಟಕ್ಕೆ ಸ್ಪಂದಿಸುತ್ತ, ಭ್ರಷ್ಟಾಚಾರ, ಕಳಪೆ ಕಾಮಗಾರಿಗಳು ನಡೆಯಬಾರದು ಎಂದು ತಾವೇ ಕ್ಷೇತ್ರದ ಸುಪ್ರವೈಸರ್ ಆಗಿ ಎಲ್ಲಾ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ, ಇಂತಹ ಶಾಸಕರನ್ನು ಪಡೆದ ಕ್ಷೇತ್ರಕ್ಕೆ ಹೆಮ್ಮೆ ಇದೆ.

ಬಿಜೆಪಿಯವರಿಗೆ ಟೀಕಿಸಲು ಕಾರಣಗಳೇ ಇಲ್ಲದಿರುವಾಗ ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ಹತಾಶೆಯಿಂದ ನೀಡುತ್ತಿದ್ದಾರೆ.

ನಮ್ಮ ಶಾಸಕರ ಕಾರ್ಯ ವೈಖರಿ ಮತ್ತು ತಂದಂತಹ ಅನುದಾನಗಳ ಮಾಹಿತಿಯನ್ನು ಸ್ವತಃ ಅವರೇ ಲೋಕಸಭಾ ಚುನಾವಣ ಪೂರ್ವದಲ್ಲಿ ಪತ್ರಿಕಾ ಘೋಷ್ಟಿ ನಡೆಸಿ ಮಾಹಿತಿ ನೀಡಿದ್ದರು,ನೀತಿ ಸಂಹಿತೆಯ ಕಾರಣದಿಂದ ಕನಿಷ್ಠ 200 ಕೋಟಿಯಷ್ಟು ಅನುದಾನ ಅನುಮೋದನೆಗೆ ಬಾಕಿ ಇದೆ,ಇನ್ನು ಕೆಲವೇ ದಿನಗಳಲ್ಲಿ ಮಂಜೂರಾತಿ ದೊರೆಯುತ್ತದೆ,ಬಿಜೆಪಿಗರು ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಿ ದಶಕಗಳ ಕಾಲ ಶಿರಸಿ ಸಿದ್ದಾಪುರ ಕ್ಷೇತ್ರವನ್ನು ಆಳಿದ ನೂತನ ಸಂಸದರಿಗೆ ಕನಿಷ್ಠ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡಿಸಲು ಹೇಳಿ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಆಗ್ರಹಿಸಿದ್ದಾರೆ.