ಹುಬ್ಬಳ್ಳಿ: ರಾಜ್ಯದಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದ್ದು, ಅವರಿಗೆಲ್ಲಾ ಸೂಕ್ತ ಉದ್ಯೋಗಾವಕಾಶಗಳು ದೊರೆಯಬೇಕು ಎಂದು ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಐ.ಮುನವಳ್ಳಿ ಹೇಳಿದರು.
ಕೆಎಲ್‍ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೊ. ಎಸ್.ವಿ.ಸಂಕನೂರ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಸಂಕನೂರ ಅವರು ಅತ್ಯಂತ ಕ್ರಿಯಾಶೀಲ ಸದಸ್ಯರಾಗಿ ಪದವೀಧರರ ಸಮಸ್ಯೆಗಳ ಪರಿಹರಿಸುತ್ತಾ ಬಂದಿದ್ದಾರೆ ಎಂದರು.
ಪ್ರಾಚಾರ್ಯ ಡಾ.ಎಲ್.ಡಿ. ಹೊರಕೇರಿ ಸ್ವಾಗತಿಸಿದರು, ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಬಿ. ಕಲಕೋಟಿ, ಎಸ್. ಎಂ.ಪಾಟೀಲ, ಡಾ. ಸಿ.ಎಂ. ಮಠ, ಪದವಿ ಪೂರ್ವ ಪ್ರಾಚಾರ್ಯ ವಿ.ಅರ್.ವಾಘಮೋಡೆ ಇದ್ದರು.