Thursday, 25th April 2024

ಫೆ.28 ರಿಂದ ಮಾ.6 ರವರೆಗೆ ತಾಳಮದ್ದಳೆ ಪ್ರದರ್ಶನ

ಶಿರಸಿ : ಟಿಎಂಎಸ್ ಸಭಾಂಗಣದಲ್ಲಿ ಫೆ.28 ರಿಂದ ಮಾ.6 ರವರೆಗೆ ಪ್ರತಿದಿನ ಸಂಜೆ 4.30 ಗಂಟೆಗೆ ತಾಳಮದ್ದಳೆ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಯಕ್ಷಧ್ವನಿ ಶಿರಸಿಯ ರಾಮಚಂದ್ರ ಭಟ್ ಹೇಳಿದರು.

ಅವರು ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹಿರಿಯ ಯಕ್ಷಗಾನ-ತಾಳಮದ್ದಲೆ ಕಲಾವಿದರ ಹೆಸರನ್ನು ಪ್ರತಿದಿನದ ಕಾರ್ಯಕ್ರಮದ ವೇದಿಕೆಗೆ ಇಟ್ಟು ಕಲಾರಾಧನೆ ನಡೆಸಲಾಗುತ್ತಿದೆ.‌ ಹಿರಿಯ ಕಲಾವಿದರ ಸಂಸ್ಕರಣೆ ಕಾರ್ಯಕ್ರಮ ಸೇರಿಸಿಕೊಳ್ಳಲಾಗಿದೆ. ಫೆ. 28 ರಂದು ಕಲಾವಿದರಿಗೆ ಸಮ್ಮಾನ ನಡೆಯಲಿದೆ. ದಾನಿಗಳ ಸಹಕಾರದಿಂದ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.

ಫೆ.28 ರಂದು ಕುಂಬಳೆ ಪಾರ್ತಿಸುಬ್ಬ ವೇದಿಕೆಯಲ್ಲಿ ಕುಂಬಳೆ ಪಾರ್ತಿಸುಬ್ಬ ವಿರಚಿತ ಪಟ್ಟಾಭಿಷೇಕ ಪ್ರಸಂಗ, ಮಾ.1 ರಂದು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವೇದಿಕೆಯಲ್ಲಿ ಬೊಟ್ಟಿನಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾ ನಿಷಾದ ಆಖ್ಯಾನ, ಮಾ. 2 ರಂದು ಜಾನಕೈ ತಿಮ್ಮಪ್ಪ ಹೆಗಡೆ ವೇದಿಕೆಯಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ವೀರಮಣಿ, ಮಾ.3 ರಂದು ಹೊಸ್ತೋಟ ಮಂಜುನಾಥ ಭಾಗವತ ವೇದಿಕೆಯಲ್ಲಿ ಗಣೇಶ ಕೊಲಕಾಡಿ ವಿರಚಿತ ಭೀಮಾಂಜನೇಯ, ಮಾ.4 ರಂದು ನೆಬ್ಬೂರು ನಾರಾಯಣ ಭಾಗವತ ವೇದಿಕೆಯಲ್ಲಿ ದೇವಿದಾಸ ವಿರಚಿತ ಭೀಷ್ಮಸೇನಾಧಿಪತ್ಯ ಮತ್ತು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ಕರ್ಮಬಂಧ ಆಖ್ಯಾನ, ಮಾ.5 ರಂದು ಶೇಣಿ ಗೋಪಾಲಕೃಷ್ಣ ಭಟ್ಟ ವೇದಿಕೆಯಲ್ಲಿ ಮೂಲಿಕೆ ರಾಮಕೃಷ್ಣಯ್ಯ ವಿರಚಿತ ಸುಧನ್ವಾರ್ಜುನ, ಮಾ.6 ರಂದು ಕೆರೆಕೈ ಕೃಷ್ಣ ಭಟ್ಟ ವೇದಿಕೆಯಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿರಚಿತ ಶ್ರೀಕೃಷ್ಣ ಪರಂಧಾಮ ಪ್ರಸಂಗಗಳು ಪ್ರದರ್ಶನಗೊಳ್ಳ ಲಿದ್ದು, ಪ್ರಸಿದ್ಧ ಭಾಗವತರು ಹಾಗೂ ಅರ್ಥಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಟೀಯಲ್ಲಿ ಯಕ್ಷಧ್ವನಿ ಶಿರಸಿ ಕಾರ್ಯದರ್ಶಿ ಪ್ರಸನ್ನ ಭಟ್ಟ ಓಣಿಕೈ, ಪ್ರಮುಖರಾದ ಎಮ್.ಕೆ.ಹೆಗಡೆ ಗೋಳಿಕೊಪ್ಪ, ವಿ.ಎನ್.ಹೆಗಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!