Tuesday, 10th December 2024

ದೇವಾಲಯಗಳ ಜೀರ್ಣೋದ್ಧರವೇ ಧಾರ್ಮಿಕ ಕಾರ್ಯಕ್ರಮಗಳ ಬುನಾದಿ

ಗುಬ್ಬಿ: ಪುರಾತನ ದೇವಾಲಯಗಳ ಜೀರ್ಣೋದ್ಧರವೇ ಧಾರ್ಮಿಕ ಕಾರ್ಯಕ್ರಮಗಳ ಬುನಾದಿ ಎಂದು ಮೇಲ್ವಿಚಾರಕ ಆನಂದ ಕುಮಾರ್  ತಿಳಿಸಿದರು.
ತಾಲೂಕಿನ ಹೊಸಕೆರೆ ವಲಯದ ಕಲ್ಲು ಪಾಳ್ಯ ಮುತ್ತು ರಾಯ ಸ್ವಾಮಿ ದೇವಾಲಯದ ಜೀರ್ಣೋ ದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ 1ಲಕ್ಷ ಮೊತ್ತದ ಡಿಡಿ ವಿತರಿಸಿ ಮಾತನಾಡಿ ಯೋಜನೆಯಿಂದ   ಸಂಘಗಳ ಮೂಲಕ ಆರ್ಥಿಕ ಸಹಕಾರದ ಜೊತೆಗೆ  ಹಲವಾರು ಕಾರ್ಯಕ್ರಮಗಳನ್ನು ಪೂಜ್ಯರು ರೂಪಿಸಿದ್ದಾರೆ.
ಸಂಘದ ಸದಸ್ಯರ ಮಕ್ಕಳು ಉನ್ನತ ಶಿಕ್ಷಣ ಮಾಡಿದರೆ ಅವರಿಗೆ ಸುಜ್ಞಾನನಿಧಿ ಶಿಷ್ಯ ವೇತನ  ಜನಮಂಗಳ ಕಾರ್ಯಕ್ರಮ ದಡಿಯಲ್ಲಿ ವಿಕಲ ಚೇತನರಿಗೆ ಉಚಿತ ಸಲಕರನಣೆಗಳ ವಿತರಣೆ, ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ಫಟಕ ಸ್ಥಾಪನೆ, ದುರ್ಬಲ ಮತ್ತು ಅಶಕ್ತರಿಗೆ ಮಾಸಿಕ ಸಹಾಯದನ, ಗ್ರಾಮದ ಕಲ್ಯಾಣಕ್ಕಾಗಿ ಕೆರೆ ಪುನ್ಹಚೇತನ,  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೇವಾಪ್ರತಿನಿಧಿ ರವಿ ದೇವಸ್ತಾನದ ಕಮಿಟಿ ಸದಸ್ಯರು, ಪ್ರಗತಿ ಬಂಧು ಸಂಘದ ಸದಸ್ಯರು ಇದ್ದರು.