ಅಂತರರಾಷ್ಟ್ರೀಯ ಮಹಿಳಾ ದಿನದಂದು, ಕರಕುಶಲ ನೇಯ್ಗೆಗಳ ಪ್ರೀಮಿಯಂ ಕಲೆಕ್ಷನ್ಗಳನ್ನು ಶಾಪಿಂಗ್ ಮಾಡಿ
‘ದಿ ಗುಡ್ ಲೂಮ್ ಕಲೆಕ್ಟಿವ್’ ಉದ್ಘಾಟನೆ ಮಾಡಿದ ಸ್ಯಾಂಡಲ್ವುಡ್ ನಟಿ ರಾಧಿಕಾ ನಾರಾಯಣ್
ಬೆಂಗಳೂರು: ನೇಕಾರರು ಮತ್ತು ಕುಶಲಕರ್ಮಿಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಿರುವ ಭಾರತದ ಮುಂಚೂಣಿ ಮಾರುಕಟ್ಟೆ ಸಂಸ್ಥೆ ಯಾಗಿರುವ ಗೋಕೂಪ್, ಟಾಟಾ ಟ್ರಸ್ಟ್ನ ಉಪಕ್ರಮವಾಗಿರುವ ಅಂತರಣ್ ಸಹಯೋಗದೊಂದಿಗೆ ‘ಗುಡ್ ಲೂಮ್ ಕಲೆಕ್ಟಿವ್’ ಪ್ರದರ್ಶನ ಏರ್ಪಡಿಸಿದೆ. ಮಾರ್ಚ್ 8 ರಿಂದ 10ರವರೆಗೆ ಈ ಪ್ರದರ್ಶನ ನಡೆಯಲಿದೆ. ಬೆಂಗಳೂರಿನ ಸ್ಯಾಂಕಿ ರಸ್ತೆಯ ಐಟಿಸಿ ವಿಂಡ್ಸರ್ ಮುಂಭಾಗದಲ್ಲಿರುವ ರೈನ್ ಟ್ರೀಯಲ್ಲಿ ಈ ಪ್ರದರ್ಶನ ಆಯೋಜನೆಗೊಂಡಿದೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ನಡೆಯಲಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯ ಅಂಗವಾಗಿ ಏರ್ಪಡಿಸಿರುವ ಈ ಪ್ರದರ್ಶನವನ್ನು ಸ್ಯಾಂಡಲ್ವುಡ್ ನಟಿ ರಾಧಿಕಾ ನಾರಾಯಣ್ ಉದ್ಘಾಟಿಸಿದರು.
ಗುಡ್ಲೂಮ್ ಪ್ರದರ್ಶನಕ್ಕೆ ನೀವು ಭೇಟಿ ನೀಡಿ ಈ ಭಾರತೀಯ ಕರಕುಶಲ ಕರ್ಮಿಗಳು ನೇಯ್ದಿರುವ ವಸ್ತ್ರಗಳನ್ನು ಶಾಪಿಂಗ್ ಮಾಡಿ. ಈ ಮೂಲಕ ನಿಮ್ಮ ಮನೆಗೆ ಹಾಗೂ ಈ ಜಗತ್ತಿಗೆ ಒಳ್ಳೆಯದನ್ನು ಮಾಡುವ ಸುವರ್ಣಾವಕಾಶ ಗಳಿಸಿಕೊಳ್ಳಿ. ಅದೇ ರೀತಿ ಭಾರತದ ಸಾಂಪ್ರದಾಯಿಕ ನೇಯ್ಗೆಯ ಬಟ್ಟೆಗಳ ಸೊಗಸಾದ ಕರಕುಶಲತೆಯನ್ನು ಅರಿತುಕೊಳ್ಳುವುದಕ್ಕೂ ಇದು ಸದಾವಕಾಶ.
ಗುಡ್ ಲೂಮ್ ಕಲೆಕ್ಟಿವ್ ಪ್ರದರ್ಶನದಲ್ಲಿ ಕೈಮಗ್ಗ ಸೀರೆಗಳು, ಬಟ್ಟೆಗಳು, ಪರಿಕರಗಳು ಮತ್ತು ಗೃಹೋಪಯೋಗಿ ವಸ್ತುಗಳ ಪ್ರೀಮಿಯಂ ಸಂಗ್ರಹಗಳು ನ್ಯಾಯಯುತ ಬೆಲೆಯಲ್ಲಿ ಅತ್ಯುತ್ತಮ ವಿನ್ಯಾಸಗಳೊಂದಿಗೆ ಲಭ್ಯವಿದೆ.
ಒಡಿಶಾದ ಮಣಿಯಬಂಧ ಮತ್ತು ಗೋಪಾಲ್ಪುರ, ಆಂಧ್ರಪ್ರದೇಶದ ವೆಂಕಟಗಿರಿ, ಮಧ್ಯಪ್ರದೇಶದ ಮಹೇಶ್ವರಿ ಸೀರೆಗಳು, ಗುಜರಾತ್ನ ಅಜ್ರಾಖ್ ಮತ್ತು ಪಟೋಲಾ ರೇಷ್ಮೆ, ಮಂಗಳಗಿರಿ, ಪೋಚಂಪಲ್ಲಿ ಇಕಟ್, ಬಲುಚಾರಿ, ಕೋಟ್ಪಾಡ್ ಮತ್ತಿತರರ ಸೊಗಸಾಗಿ ಕೈಯಿಂದ ನೇಯ್ದ ಸೀರೆಗಳು ಇಲ್ಲಿ ಪ್ರದರ್ಶನ ಗೊಳ್ಳಲಿವೆ. ಅಸ್ಸಾಂ ಮತ್ತು ನಾಗಾಲ್ಯಾಂಡ್ ನಿಂದ ವಿಶೇಷ ಕಲೆಕ್ಷನ್ಗಳು ಇಲ್ಲಿದ್ದು, ಇದು ಈ ಪ್ರದೇಶದ ಕೆಲವು ಅಪರೂಪದ ಕರಕುಶಲ ಮತ್ತು ನೇಯ್ಗೆಗಳನ್ನು ಒಳಗೊಂಡಿರುತ್ತವೆ.
ಗುಡ್ ಲೂಮ್ ಎಂಬುದು ಗೋಕೂಪ್ ನ ಬ್ರಾಂಡ್ ಆಗಿದ್ದು, ಇದು ಕರಕುಶಲ ವಸ್ತುಗಳು, ಕುಶಲಕರ್ಮಿಗಳು ಮತ್ತು ಪರಿಸರದ ಬಗ್ಗೆ ಚಿಂತನೆಯನ್ನು ಹೊಂದಿದ್ದು ಭಾರತೀಯ ನೇಯ್ಗೆಯ ಶ್ರೀಮಂತಿಕೆಗೆ ಉತ್ತೇಜನ ನೀಡುತ್ತದೆ. ಶ್ರೀಮಂತ ಕರಕುಶಲ ಪರಂಪರೆ, ಅಪರೂಪದ ಕರಕುಶಲತೆ ಮತ್ತು ಸಮಕಾಲೀನ ವಿನ್ಯಾಸದ ಬಗ್ಗೆ ಗೊಕೂಪ್ ನ ಉತ್ಸಾಹದ ಫಲಿತಾಂಶವೇ ಗುಡ್ಲೂಮ್ ಬ್ರಾಂಡ್.
ಅಂತರಣ್, ನೇಯ್ಗೆ ಸಮೂಹಗಳ ಸಮಗ್ರ ಅಭಿವೃದ್ಧಿ, ತಾಂತ್ರಿಕ ಪ್ರಗತಿ, ವಿನ್ಯಾಸ, ಗುಣಮಟ್ಟ, ಉದ್ಯಮ, ಮಾರುಕಟ್ಟೆ ಅಭಿವೃದ್ಧಿ ಮತ್ತು ಸುಸ್ಥಿರತೆಗೆ ಒತ್ತು ನೀಡುವ ವಿಶಿಷ್ಟ ಉಪಕ್ರಮವಾಗಿದೆ. ಅಸ್ಸಾಂ (ಕಾಮ್ರೂಪ್ ಮತ್ತು ನಲ್ಬಾರಿ), ನಾಗಾಲ್ಯಾಂಡ್ (ದಿಮಾಪುರ್), ಒಡಿಶಾ (ಗೋಪಾಲ್ಪುರ ಮತ್ತು ಮಣಿಯಬಂದ) ಮತ್ತು ಆಂಧ್ರಪ್ರದೇಶ (ವೆಂಕಟಗಿರಿ) ಸೇರಿದಂತೆ 4 ರಾಜ್ಯಗಳಲ್ಲಿ ಆರು ನೇಯ್ಗೆ ಕ್ಲಸ್ಟರ್ಗಳಲ್ಲಿ ಅಂತರಣ್ ಕಾರ್ಯನಿರ್ವಹಿಸುತ್ತಿದೆ. ನೇಯ್ಗೆಯಲ್ಲಿನ ವಿನ್ಯಾಸ ಅಭಿವೃದ್ಧಿ ಮತ್ತು ಮೌಲ್ಯವರ್ಧನೆ ಸೇರಿದಂತೆ ಪ್ರತಿಯೊಂದು ಅಂಶಗಳ ಮೂಲಕ ಸ್ಥಳೀಯ ಉದ್ಯಮಗಳಿಗೆ ನೆರವಾಗುತ್ತಿದೆ.
ದಯವಿಟ್ಟು ಅಂತರಣ್ ಸಹಯೋಗದೊಂದಿಗೆ ಗೋಕೂಪ್ ಆಯೋಜಿಸಿರುವ ‘ದಿ ಗುಡ್ ಲೂಮ್ ಕಲೆಕ್ಟಿವ್’ ಗೆ ಭೇಟಿ ನೀಡಿದೆ. ಭಾರತೀಯ ಕೈಮಗ್ಗ ನೇಯ್ಗೆಯ ಶ್ರೀಮಂತಿಕೆಯನ್ನು ಅನುಭವಿಸಿ. ಕಲೆ ಮತ್ತು ಜವಳಿ ಕ್ಷೇತ್ರದಲ್ಲಿ ಭಾರತದ ಶ್ರೀಮಂತ ಪರಂಪರೆಯ ಮತ್ತು ವೈವಿಧ್ಯತೆಯನ್ನು ಆಚರಿಸಿ.