Friday, 13th December 2024

ತಿಗಳ ಸಮುದಾಯವು ಶೈಕ್ಷಣಿಕ, ರಾಜಕೀಯದಲ್ಲಿ ಪ್ರಬಲವಾಗಬೇಕು

ಗುಬ್ಬಿ : ತಿಗಳ ಸಮುದಾಯವು ಆರ್ಥಿಕವಾಗಿ ಸಬಲರಾದರೆ ಸಾಲದು ಶೈಕ್ಷಣಿಕ ಮತ್ತು ರಾಜಕೀಯದಲ್ಲಿ ಪ್ರಬಲ ವಾಗಬೇಕು ಎಂದು ತಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಂಡೆ ರಾಮಣ್ಣ ತಿಳಿಸಿದರು.

ಪಟ್ಟಣದ ಎವಿಕೆ ಸಮುದಾಯ ಭವನ ಆವರಣದಲ್ಲಿ ನಡೆದ ಅಗ್ನಿ ಬನ್ನಿರಾಯ ಜಯಂತೋತ್ಸವ ಕಾರ್ಯ ಕ್ರಮದಲ್ಲಿ ಮಾತನಾಡಿ ರಾಜ್ಯದ್ಯಂತ ತಿಗಳ ಸಮುದಾಯವು ಕೃಷಿ ಆಧಾರಿತವಾಗಿದ್ದು ಜನಾಂಗದ ಏಳಿಗೆಗಾಗಿ ಶೈಕ್ಷಣಿಕ ಹಾಗೂ ರಾಜ್ಯಕೀಯವಾಗಿ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.
 ಹಿಂದುಳಿದ ವರ್ಗಗಳ ಯೋಜನಾ ಆಯೋಗದ ಮಾಜಿ ಸದಸ್ಯ ಯೋಗಾನಂದ್ ಮಾತನಾಡಿ ತಿಗಳ ಸಮಾಜಕ್ಕೆ 1700 ವರ್ಷಗಳ ಹಿಂದಿನ ಇತಿಹಾಸವಿದೆ ಜನಾಂಗದ  ಐತಿಹಾಸಿಕ ಮಹತ್ವವನ್ನು ಸಾರುವ ಅಂತಹ ಅದ್ದೂರಿ ಜಯಂತೋತ್ಸವ  ತಾಲೂಕು ಮಟ್ಟದಲ್ಲಿ ಸಾವಿರಾರು ಸಮುದಾಯದ ಬಂಧುಗಳು ಕುಲದ ಯಜಮಾನರು   ಆಣೆಕಾರ್   ಜೊತೆಗೂಡಿ ಅದ್ದೂರಿಯಾಗಿ ನೆರವೇರಿದೆ  ಎಲ್ಲರೂ ಒಗ್ಗಟ್ಟಿನಿಂದ  ಸಮಾಜದ ಏಳಿಗೆಗೆ  ಶ್ರಮಿಸ ಬೇಕಿದೆ ಎಂದು  ತಿಳಿಸಿದರು.
 ಶಿಕ್ಷಕಿ ಮಂಜಮ್ಮ ಮಾತನಾಡಿ ಪೋಷಕರು  ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು  ತಿಗಳ ಸಮುದಾಯದವರು ತರಕಾರಿ ಅಡಿಕೆ ವ್ಯಾಪಾರ ಮಾಡಲು ಸೀಮಿತರಲ್ಲ.ಅವರು ಶೈಕ್ಷಣಿಕವಾಗಿ ರಾಜಕೀಯವಾಗಿ ಸದೃಢರಾಗಬೇಕು.ಡಾ” ಬಿ ಆರ್ ಅಂಬೇಡ್ಕರ್ ಹೇಳಿದಾಹಾಗೆ ಶಿಕ್ಷಣವನ್ನು ಹೊಂದಿ ಸಂಘಟನೆಯನ್ನು ಮಾಡಿ ಹೋರಾಟ ಮನೋಬಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಸಾಗರನಹಳ್ಳಿ ನಂಜೇಗೌಡ, ಪ ಪಂ ಉಪಾಧ್ಯಕ್ಷೆ ಮಹಾಲಕ್ಷ್ಮಿ ಲೋಕೇಶ್ ಬಾಬು, ಸದಸ್ಯರಾದ ಕುಮಾರ್, ಕೃಷ್ಣಮೂರ್ತಿ, ಸಂಶೋಧಕ ಡಾ.ಮಧುಸೂದನ್, ಬಲರಾಮ್, ಗ್ರಾ ಪಂ ಅಧ್ಯಕ್ಷ ನರಸೇಗೌಡ, ಗ್ರಾ ಪಂ ಸದಸ್ಯ  ಲಕ್ಕೇನಹಳ್ಳಿ  ಕೃಷ್ಣಮೂರ್ತಿ, ,ಕೃಷ್ಣಮೂರ್ತಿ, ಗಂಗಣ್ಣ, ಮಡೇನಳ್ಳಿ ಹುಚ್ಚೇಗೌಡ, ಎಚ್ ಡಿ ನಾಗರಾಜ್ ಡಾ ಅಶ್ವಥ್ ನಾಗಣ್ಣ ರಾಮಚಂದ್ರಯ್ಯ, ತಿಗಳ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕರು ಸದಸ್ಯರು ಹಾಜರಿದ್ದರು.