ತಿಪಟೂರು: ನಗರ ಸಭೆ ಆಯುಕ್ತರು ನಗರದ ಮುಖ್ಯ ರಸ್ತೆಗಳಲ್ಲಿ ಫುಟ್ ಪಾತ್ ಅನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ಬೀದಿಬದಿ ವ್ಯಾಪಾರಸ್ಥರ ಸ್ಥಳ ಪರಿಶೀಲನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಫುಟ್ ಬಾತ್ ಒತ್ತುವರಿ ಆಗಿರುವ ಕಾರಣದಿಂದ ಬಹಳಷ್ಟು ಅಪಘಾತಗಳು ಹೆಚ್ಚುತ್ತಿರುವುದನ್ನು ತಡೆ ಯುವ ಸಲುವಾಗಿ ಹಾಗೂ ಫುಟ್ ಬಾತ್ ಇಲ್ಲದೆ ರಸ್ತೆಯಲ್ಲೇ ಸಂಚರಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿ ಕರ ಹಿತಾಸಕ್ತಿ ಕಾಪಾಡುವ ಸಲುವಾಗಿ ದಿಢೀರನೆ ಭೇಟಿ ನೀಡಿದ ನಗರಸಭೆ ಆಯುಕ್ತರದ ವಿಶ್ವೇಶ್ವರಯ್ಯ ಬಡಿಗೇರ ಫುಟ್ ಬಾತ್ ಅನ್ನು ಒತ್ತುವರಿ ಮಾಡಿರುವ ಅಂಗಡಿ ಮಾಲೀಕರಿಗೆ ಇನ್ನೆರಡು ದಿನಗಳಲ್ಲಿ ತೆರವು ಮಾಡಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಜರುಗಿಸುವುದಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.