Sunday, 13th October 2024

Tiptur News: ಒಳಮೀಸಲಾತಿಗೆ ಒತ್ತಾಯಿಸಿ ಸೆ.21ರಂದು ತಿಪಟೂರಿನಲ್ಲಿ ಬೃಹತ್ ತಮಟೆ ಚಳುವಳಿ

ತಿಪಟೂರು: ಒಳಮೀಸಲಾತಿ(Inner Reservation) ಗೆ ಒತ್ತಾಯಿಸಿ ಸೆ.21ರಂದು ತಿಪಟೂರಿ(Tiptur) ನಲ್ಲಿ ಕರ್ನಾಟಕ ಮಾದಿಗ ದಂಡೋರ ಹೋರಾಟ (Karnataka Maadiga Dandora Committee) ಸಮಿತಿಯಿಂದ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯಸರ್ಕಾರ ಸುಪ್ರೀಂ ಕೋರ್ಟ್ (Supreme court) ನಿರ್ದೇಶನದಂತೆ ಒಳಮೀಸಲಾತಿ ಜಾರಿಗೊಳಿಸಬೇಕು.

ದಶಕಗಳ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯದ ಪರವಾಗಿರುವ ಒಳಮೀಸಲಾತಿ ಜಾರಿಗೆ ಸುರ್ಪೀಂ ಕೋರ್ಟ್ ಅನುಮತಿ ನೀಡಿದೆ. ರಾಜ್ಯಸರ್ಕಾರಗಳು ಒಳಮೀಸಲಾತಿ ಜಾರಿಗೆ ಅಧಿಕಾರ ಹೊಂದಿರುವುದಾಗಿ ತಿಳಿಸಿದೆ ಎಂದು ಕೋರ್ಟ್ ಆದೇಶ ನೀಡಿದರೂ ಸಹ ಸಾಮಾಜಿಕ ನ್ಯಾಯದ ಪರ ಎಂದು ರಾಜ್ಯದ ಜನ ನಂಬಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ.

ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಸೆ.21ರಂದು ತಿಪಟೂರಿನಲ್ಲಿ ಬೃಹತ್ ತಮಟೆ ಚಳುವಳಿ ಹಮ್ಮಿ ಕೊಂಡಿದ್ದು, ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ನಂತರ ತಿಪಟೂರು ಶಾಸಕ ಕೆ.ಷಡಕ್ಷರಿಯವರಿಗೆ ಮನವಿ ಪತ್ರಸಲ್ಲಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕುಪ್ಪಾಳು ರಂಗಸ್ವಾಮಿ ಮಾತನಾಡಿ ದಲಿತರ ಪರವಾದ ಕಾಂಗ್ರೇಸ್ ಸರ್ಕಾರ ಎಂದು ಬಿಂಬಿಸಿ ಕೊಳ್ಳುತ್ತಿದೆ, ರಾಜ್ಯಸರ್ಕಾರ ದಲಿತವಿರೋದಿಯಾಗಿ ವರ್ತಿಸುತ್ತದೆ, ಒಳಮೀಸಲಾತಿ ಜಾರಿಗೊಳಿ ಸಲು, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಹರಿಯಾಣ, ಸರ್ಕಾರಗಳು ಮುಂದಾಗಿವೆ, ಆದರೆ ಚುನಾವಣಾ ಪೂರ್ವ ದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ ರಾಜ್ಯಸರ್ಕಾರ, ಅಧಿಕಾರಕ್ಕೆ ಬಂದ ತಕ್ಷಣ ಮಾತಿಗೆ ತಪ್ಪಿದೆ. ಬೇಷರತ್ ಒಳಮೀಸಲಾತಿ ಜಾರಿಗೊಳಿಸದಿದ್ದರೆ, ರಾಜ್ಯಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡ ಬೇಕಾಗುತ್ತದೆ. ಮುಂದಿನ ಚುನಾವಣೆಗಳಲ್ಲಿ ಮಾದಿಗ ಜನಾಂಗದ ಶಕ್ತಿಯನ್ನ ತೋರಿಸಬೇಕಾಗುತ್ತದೆ. ರಾಜ್ಯಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿ, ರಾಜ್ಯಸರ್ಕಾರ ಒಳಮೀಸಲಾತಿ ಜಾರಿಗೊಳಿಸಿ ಬದ್ದತೆ ಪ್ರದರ್ಶನ ಮಾಡ ಬೇಕು. ಚುನಾವಣೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮಾತನಾಡಿ, ಭರವಸೆ ನೀಡಿದ ಸಿದ್ದರಾಮಯ್ಯ. ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಮಹದೇವಪ್ಪ ಚುನಾವಣೆ ನಂತರ ಮಾತು ತಪ್ಪಿದ್ದು ಮಾದಿಗ ಜನಾಂಗದ ವಿರೋಧಿಗಳಾಗಿ ವರ್ತಿಸುತ್ತಿದ್ದಾರೆ. ನಾವೂ ಯಾರ ಆಸ್ತಿಯನೂ ಕೇಳಿಲ್ಲ. ಸಂವಿಧಾನ ಬದ್ದವಾಗಿ ನಮಗೆ ಅನ್ಯಾಯ ವಾಗಿದ್ದು ಮೀಸಲಾತಿಯಲ್ಲಿ ನ್ಯಾಯಬದ್ದವಾಗಿ ಫಲ ದೊರೆಯಬೇಕಾದರೆ ಒಳಮೀಸಲಾತಿ ಜಾರಿಯಾಗಬೇಕು ನಮ್ಮ ಪಾಲಿನ ಹಕ್ಕು ನಮಗೆ ದೊರೆಯಬೇಕು. ನಮ್ಮ ಹಕ್ಕು ನಮಗೆ ದೊರೆಯದಿದ್ದರೆ ಯಾವುದೇ ತ್ಯಾಗಕ್ಕೂ ಹಿಂಜರಿಯುವುದಿಲ್ಲ. ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಸರ್ಕಾರ ನಮ್ಮ ಹೋರಾಟ ನಿರ್ಲಕ್ಷ್ಯ ಮಾಡಿದರೆ, ರಾಜ್ಯದ ಪ್ರತಿತಾಲ್ಲೊಕು ಕೇಂದ್ರದಲ್ಲೂ ಹೋರಾಟ ನಡೆಸಲಾಗುವುದು. ತಿಪಟೂರಿಲ್ಲಿ ನಡೆಸುತ್ತಿರುವ ಬೃಹತ್ ತಮಟೆ ಚಳುವಳಿಯಲ್ಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಗಾಂಧಿನಗರ ಬಸವರಾಜು, ಬಿಳಿಗೆರೆ ಚಂದ್ರಶೇಖರ್, ಲಿಂಗದೇವರು, ಈಚನೂರು ಸೋಮಶೇಖರ್. ಟಿ.ಕೆ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Tiptur crime: ಜೀತದಾಳು ಗಳಂತೆ ದುಡಿಸಿಕೊಳ್ಳುತ್ತಿದ್ದ 30 ಜನ ಕೂಲಿ ಕಾರ್ಮಿಕರು ಪೊಲೀಸರ ವಶಕ್ಕೆ