ತಿಪಟೂರು: ಸೊಗಡು ಜನಪದ ಹೆಜ್ಜೆ ವತಿಯಿಂದ ಎರಡು ದಿನಗಳ ಕಾಲ ಆಯೋಜನೆ ಮಾಡಲಾ ಗಿರುವ ರಾಗಿ ರುಚಿ ಸವಿಯೋಣ ಬನ್ನಿ ಕಾರ್ಯಕ್ರಮ, ಶ್ರೀ ಸತ್ಯ ಗಣಪತಿ ಅಮೃತ ಭವನದಲ್ಲಿ ಏರ್ಪಡಿಸಲಾಗಿದೆ.
ಮೊದಲನೇ ದಿನ ಶನಿವಾರ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಆಯೋಜಿ ಸಿದ್ದ, ರಾಗಿಕಲ್ಲು ಬೀಸುವ ಸ್ಪರ್ಧೆ ಉದ್ಘಾಟಿಸಿದ ಶಾಸಕ ಕೆ. ಷಡಕ್ಷರಿ ಹಾಗೂ ಉಪ ವಿಭಾಗ ಅಧಿಕಾರಿ ಸಪ್ತಶ್ರೀ ಸ್ವತಃ ರಾಗಿ ಬೀಸಿ ಎಲ್ಲರ ಗಮನ ಸೆಳೆದರು.
ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪುರುಷರಿಗೆ ರಾಗಿ ಮುದ್ದೆ ಊಟ ಮಾಡುವ ಸ್ಪರ್ಧೆ, ಮಹಿಳೆಯ ರಿಗೆ ರಾಗಿ ಬೀಸುವ ಸ್ಪರ್ಧೆ ಮತ್ತು ಮಕ್ಕಳಿಗೆ ರಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ರಾಗಿ ಖಾದ್ಯ ತಯಾರಕರು ವಿಧ ವಿಧವಾದ ರಾಗಿ ಖಾದ್ಯ ಪ್ರದರ್ಶನ ಮಾಡುವುದರ ಜೊತೆಗೆ ಅಪ್ಪಟ ರಾಗಿಯಿಂದ ತಯಾರಿಸಿದ ತಿನಿಸುಗಳ ಮಾರಾಟ ಕೂಡ ಮಾಡಿದರು.
ಇದೇ ಸಂದರ್ಭದಲ್ಲಿ ಬಿದರೆಗುಡಿ ತಿಮ್ಲಾಪುರ ಗ್ರಾಮದ ರೈತ ಹೆಸರುಗಂಬಿ ರಾಗಿ ತಳಿಯ ಸಂರಕ್ಷಕ ಬೈರೇಶ್ ನನ್ನು ಸನ್ಮಾನಿಸಲಾಯಿತು.