ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕೆ.ಪಿ.ಜ್ಯೋತಿ ಚುನಾವಣೆಯ ಲಾಟರಿಯ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಪವನ್‌ಕುಮಾರ್ ಘೋಷಣೆ ಮಾಡಿದರು.
24 ಜನ ಸದಸ್ಯರ ಗ್ರಾಮ ಪಂಚಾಯಿತಿಯಲ್ಲ್ರಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಪಿ.ಜ್ಯೋತಿ, ರೇಣುಕಮ್ಮ. ಜಿ.ಎಸ್, ಚೇತನಕುಮಾರಿ.ಎಮ್.ಹೆಚ್ ಮೂವರು ಅಭ್ಯರ್ಥೀಗಳು ನಾಮಪತ್ರ ಸಲ್ಲಿಸಿದ್ದು ಕೆ.ಪಿ. ಜ್ಯೋತಿ, 9 ಮತಗಳು, ರೇಣುಕಮ್ಮ 9 ಮತಗಳು ಚೇತನಕುಮಾರಿ 4 ಮತಗಳನ್ನು ಪಡೆದಿದ್ದು 2 ಮತಗಳು ತಿರಸ್ಕೃತ ಗೊಂಡಿದ್ದು, ಇಬ್ಬರು ಅಭ್ಯರ್ಥಿಗಳಿಗೆ 9 ಮತ ಬಂದಿದ್ದರಿ0ದ ಕೊನೆಗೆ ಲಾಟರಿ ಮೂಲಕ ಕೆ.ಪಿ.ಜ್ಯೋತಿ ಯವರನ್ನು ಮುಂದಿನ ಅವಧಿಗೆ ಅಧ್ಯಕ್ಷರಾಗಿ ಘೋಷಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷ ನವೀನಕುಮಾರ್, ಸದಸ್ಯರಾದ ಮಾಧುಸ್ವಾಮಿ, ಚಿನ್ನಸ್ವಾಮಿ, ನಟರಾಜು, ಹರೀಶ್, ರಮೇಶ್, ಪವಿತ್ರ, ಚನ್ನಬಸವಯ್ಯ, ಹರೀಶ್‌ಗೌಡ, ತಿಮ್ಮಣ್ಣ, ಶಿಲ್ಪ, ತೀರ್ಥವತಿ, ಸರೋಜಮ್ಮ, ವೆಂಕಟೇಶ್, ವಿಜಯಲಕ್ಷ್ಮೀ, ವರಮಹಾಲಕ್ಷ್ಮೀ , ಜ್ಯೋತಿ ವಸಂತಕುಮಾರಿ, ರೇಣುಕಮ್ಮ.ಜಿ.ಎಸ್, ಚೇತನಕುಮಾರಿ. ಎಮ್.ಹೆಚ್, ತೇಜಾವತಿ, ಮಲ್ಲಿಕಾರ್ಜುನಯ್ಯ, ಲೋಕೇಶ್, ಮುಖಂಡರಾದ ಬೋಜೆಗೌಡ, ಟಿಂಬರ್ ಶಶಿಧರ್, ಲಿಂಗರಾಜು, ಮತ್ತಿಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವನಂದಮೂರ್ತಿ, ಚುನಾವಣದಿಕಾರಿ ಸಿಬ್ಬಂದಿ, ಪಿಡಿಒ ಶಿವರಾಜ್, ಗ್ರಾಮಾಂತರ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಮತ್ತಿತರರು ಹಾಜರಿದ್ದರು.