ದಾವಣಗೆರೆ: ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿಯ ೮೦ನೇ ವರ್ಷಾಚರಣೆ ಪ್ರಯುಕ್ತ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಮಹಾನಗರ ಪಾಲಿಕೆ ವರೆಗೂ ತಿರಂಗಾ ಯಾತ್ರೆ ನಡೆಸಲಾಯಿತು.
ತಿರಂಗ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಭಾರತದ ಸ್ವಾತಂತ್ರ್ಯ ಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ೧೯೪೨ರಲ್ಲಿ ವೀರ ಮರಣವನ್ನಪ್ಪಿದ ಹುತಾತ್ಮರ ೮೦ನೇ ವರ್ಷದ ಸ್ಮರಣೆ ಇದು.
ಈಗಾಗಲೇ ಬಿಜೆಪಿಯಿಂದ ೧೦ ವರ್ಷಗಳಿಂದ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟ ದಲ್ಲಿ ದಾವಣಗೆರೆಯ ಬಿದರಕುಂದಿ ನಿಂಗಪ್ಪ, ಅಕ್ಕಸಾಲಿ ವಿರುಪಾಕ್ಷಪ್ಪ, ಹಳ್ಳೂರು ನಾಗಪ್ಪ, ಹಮಾಲಿ ತಿಪ್ಪಣ್ಣ, ಮಾಗನಹಳ್ಳಿ ಹನುಮಂತಪ್ಪ, ಹದಡಿ ನಿಂಗಪ್ಪ ಎಂಬ ಆರು ಜನ ಹುತಾತ್ಮರಾದರು. ಅವರ ಹೋರಾಟ ಶ್ಲಾಘನೀಯವಾದುದು ಎಂದು ಸ್ಮರಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಸ್ವಾತಂತ್ರ್ಯ ಅಮೃತ ಮಹೋ ತ್ಸವದ ಅಂಗವಾಗಿ ಪ್ರತಿಮನೆಯಲ್ಲೂ ತಿರಂಗ ಹಾರಿಸಬೇಕೆಂದು ಪ್ರಧಾನಿ ಕರೆ ನೀಡಿ ದ್ದಾರೆ. ೧೩ರಿಂದ ೧೫ರವರೆಗೆ ವಾಹನ, ಕಚೇರಿ, ಮನೆಗಳಲ್ಲಿ ತಿರಂಗ ಹಾರಿಸಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರ ಸೇನಾನಿಗಳನ್ನು ನೆನೆಯೋಣ ಎಂದು ಕರೆ ನೀಡಿದರು.
ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಯಾರೊಬ್ಬರು ಹೋರಾಡಿಲ್ಲ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಾರೆ. ಮೊದಲು ಕಾಂಗ್ರೆಸ್ ಅನ್ನುವುದು ನಕಲಿಯೋ ಅಥವಾ ಅಸಲಿಯೋ? ಎಂಬುದನ್ನು ಅವರು ಸ್ಪಷ್ಟಪಡಿಸಬೇಕಿದೆ. ಏಕೆಂದರೆ ಮಹಾತ್ಮ ಗಾಂಧಿ ಸ್ಥಾಪಿಸಿದ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಲೂಟಿ ಹೊಡೆಯಲು, ಆಡಳಿತ ಮಾಡಲು ಹುಟ್ಟಿಕೊಂಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿಗಳಿಗೆ ಗೌರವ ಕೊಡುವ ಪಕ್ಷವೇನಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದರು.
ಪಾಲಿಕೆ ಉಪ ಮೇಯರ್ ಗಾಯತ್ರಿ ಖಂಡೋಜಿ ರಾವ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಲ್.ಡಿ. ಗೋಣೆಪ್ಪ, ಸೋಗಿ ಶಾಂತಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್.ಎಲ್. ಶಿವಪ್ರಕಾಶ್, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಶಿವನಗೌಡ ಪಾಟೀಲ್, ಪಿ.ಸಿ. ಶ್ರೀನಿವಾಸ ಭಟ್, ಸವಿತಾ, ಮತ್ತಿತರರು ಉಪಸ್ಥಿತರಿದ್ದರು.
***
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ರಾಷ್ಟ್ರಧ್ವಜದಲ್ಲಿ ಕೆಂಪು, ಹಸಿರು, ಬಿಳಿಯ ಬಣ್ಣವಿದೆ ಎನ್ನುತ್ತಾರೆ. ಅಂದರೆ ಅವರಿಗೆ ತಿರಂಗ ಧ್ವಜದ ಬಣ್ಣವೂ ಗೊತ್ತಿಲ್ಲ ಹಾಗಿದ್ದಮೇಲೆ ಇವರು ಅದೆಂಥ ಮಾಜಿ ಮುಖ್ಯಮಂತ್ರಿ?
-ಯಶವಂತರಾವ್ ಜಾಧವ್
ಮಾಜಿ ಜಿಲ್ಲಾಧ್ಯಕ್ಷ, ಬಿಜೆಪಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ರಾಷ್ಟ್ರಧ್ವಜದಲ್ಲಿ ಕೆಂಪು, ಹಸಿರು, ಬಿಳಿಯ ಬಣ್ಣವಿದೆ ಎನ್ನುತ್ತಾರೆ. ಅಂದರೆ ಅವರಿಗೆ ತಿರಂಗ ಧ್ವಜದ ಬಣ್ಣವೂ ಗೊತ್ತಿಲ್ಲ ಹಾಗಿದ್ದಮೇಲೆ ಇವರು ಅದೆಂಥ ಮಾಜಿ ಮುಖ್ಯಮಂತ್ರಿ?
-ಯಶವಂತರಾವ್ ಜಾಧವ್
ಮಾಜಿ ಜಿಲ್ಲಾಧ್ಯಕ್ಷ, ಬಿಜೆಪಿ