Friday, 13th December 2024

ಟೂಡಾ ಅಧ್ಯಕ್ಷರಾಗಿ ಚಂದ್ರಶೇಖರ್ ನೇಮಕ 

ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ಸರಕಾರ ನೇಮಕ ಮಾಡಿ ಆದೇಶಿಸಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ಬಟವಾಡಿಯ ಹೆಚ್.ಜಿ. ಚಂದ್ರಶೇಖರ್, ಸದಸ್ಯರುಗಳನ್ನಾಗಿ ಸತ್ಯ ಮಂಗಲದ ಎಸ್.ಹೆಚ್. ಜಗದೀಶ್, ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ನ ಮಾಯರಂಗಣ್ಣ, ಸಿರಾಗೇಟ್ ಟೂಡಾ ಲೇಔಟ್‌ನ ಸಿ.ಹೆಚ್. ನಾಗರತ್ನ ಅವರನ್ನು  ನೇಮಕ ಮಾಡಿದೆ.
ಈ ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಸರಕಾರದ ಮುಂದಿನ ಆದೇಶದವರೆಗೆ ನೇಮಕ ಮಾಡಿರುವುದಾಗಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.