Friday, 13th December 2024

ಪಾವಗಡದಲ್ಲಿ ತಪ್ಪಿದ ಬಸ್​ ದುರಂತ

ತುಮಕೂರು: ತುಮಕೂರಿನ ಪಾವಗಡದಲ್ಲಿ ಮತ್ತೊಂದು ಬಸ್​ ದುರಂತ ಸ್ವಲ್ಪದರಲ್ಲೇ ತಪ್ಪಿದೆ.

ಧಾರಾಕಾರ ಮಳೆಯಿಂದಾಗಿ ವೆಂಕಟಾಪುರ ಬಳಿಯಿರುವ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಹೀಗಿದ್ದರೂ ಜಾಗರೂಕತೆ ವಹಿಸಬೇಕಿದ್ದ ಚಾಲಕ, ಹಿಂದು-ಮುಂದು ಯೋಚಿಸಿದೆ ಸೇತುವೆ ಮೇಲೆಯೇ ಬಸ್​ ಚಲಾಯಿಸಿಕೊಂಡು ಹೋಗಿದ್ದಾನೆ. ಪರಿಣಾಮ ಬಸ್​ ಸೇತುವೆ ನಡುವೆಯೇ ಬಸ್​ ಸಿಲುಕಿತು.

ಹಿಂದೂಪುರದಿಂದ ವೆಂಕಟಾಪುರ ಮಾರ್ಗವಾಗಿ ಪಾವಗಡಕ್ಕೆ ಬಸ್​ ಬರುತ್ತಿತ್ತು. ಸೇತುವೆ ಮೇಲಿನ ನೀರಿನ ರಭಸಕ್ಕೆ ಬಸ್​ ಮುಂದೆ ಸಾಗದೆ ಅಲ್ಲಿಯೇ ನಿಂತಿತು. ಬಸ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ತುಂಬಿದ್ದರು. ವೆಂಕಟಾಪುರ ಗ್ರಾಮಸ್ಥರು ಹಗ್ಗದ ಸಹಾಯದಿಂದ ಬಸ್​ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಚಾಲಕ ಬಸ್​ ಚಲಾಯಿಸಿಕೊಂಡು ಇನ್ನು ಸ್ವಲ್ಪ ಮುಂದೆ ಹೋಗಿದ್ದರೆ, ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್​ ದುರಂತ ತಪ್ಪಿದೆ.

ಹಿಂದೊಮ್ಮೆ ಪಾವಡಗದಲ್ಲಿ ಬಸ್​ ಪಲ್ಟಿಯಾಗಿ 6 ಮಂದಿ ಸ್ಥಳದಲ್ಲೇ ಮೃತಪಟ್ಟು, ಸಾಕಷ್ಟು ಜನರು ಗಂಭೀರವಾಗಿ ಗಾಯಗೊಂಡಿದ್ದರು.